ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ಮೊಬೈಲ್ ಫೋನ್  ಕಳವು: ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು:   ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಮಹಿಳೆಯ ಮೊಬೈಲ್ ಫೋನ್ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಕಸ್ಟಡಿಗೆ   ತೆಗೆದುಕೊಂಡಿದ್ದಾರೆ. ಈಗ ಚೆರ್ಕಳದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಮೂಲತಃ ಮುಟ್ಟತ್ತೋಡಿ ತೈವಳಪ್ಪು ನಿವಾಸಿ ಅಜ್ಮಲ್ ಫಿರೋಸಾ (23)  ಪೊಲೀಸ್ ಕಸ್ಟಡಿಗೊಳಗಾದ ಆರೋಪಿ. ಮೇ ೫ರಂದು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ  ದಾಖಲಾಗಿದ್ದ ಬೋವಿಕ್ಕಾನ ನಿವಾಸಿ ರಮ್ಯ ಎಂಬವರ 70,000 ರೂ. ಮೌಲ್ಯದ  ಮೊಬೈಲ್ ಫೋನ್ ಕಳವುಗೈದ ಬಗ್ಗೆ ಅವರು ನಿಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಅದಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page