ಅಕ್ರಮ ಹಣ ವರ್ಗಾವಣೆ: ಇ.ಡಿ ಮುಂದೆ ಹಾಜರಾದ  ವೀಣಾ ವಿಜಯನ್: ಬಿಗಿ ಭದ್ರತೆ

ಕೊಚ್ಚಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ಹಾಗೂ ಎಕ್ಸಾಲೋಜಿಕಲ್ ಎಂಬ ಸಂಸ್ಥೆಯ ಮಾಲಕಿಯಾಗಿರುವ ವೀಣಾ ವಿಜಯನ್ ಈ ಪ್ರಕರಣದ ವಿಚಾರಣೆಗಾಗಿ ಇಂದು ಬೆಳಿಗ್ಗೆ ಕೊಚ್ಚಿಯಲ್ಲಿರುವ ಡೈರೆಕ್ಟರ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ) ಕಚೇರಿ ಮುಂದೆ ಹಾಜರಾದರು. ಬಳಿಕ ಉನ್ನತ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಯ ವಿಷಯದಲ್ಲಿ ಹಲವು ಪ್ರಶ್ನೆಗಳನ್ನು ವೀಣಾರ ಮುಂದಿರಿಸಿ ಆ ಕುರಿತಾಗಿ ಅವರ ಹೇಳಿಕೆಯನ್ನು ದಾಖಲಿಸುವ ಕ್ರಮದಲ್ಲಿ ತೊಡಗಿದರು.   ಪತಿ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ಜತೆ ಇಂದು ಬೆಳಿಗ್ಗೆ 10.30ಕ್ಕೆ ಇ.ಡಿ ಕಚೇರಿಗೆ ವೀಣಾ ವಿಜಯನ್ ಹಾಜರಾದರು. ನಂತರ ಅವರು ಇ.ಡಿ ಕಚೇರಿಯೊಳಗೆ ಪ್ರವೇಶಿಸಿದಾಗ ಪತಿ ಮೊಹಮ್ಮದ್ ರಿಯಾಸ್ ಕೂಡಾ ಅವರ ಜತೆ ಕಚೇರಿಗೆ ಪ್ರವೇಶಿಸಲೆತ್ನಿ ಸಿದಾಗ ಅವರನ್ನು ಇ.ಡಿ ಸಿಬ್ಬಂದಿಗಳು ಮತ್ತು ಪೊಲೀಸರು ತಡೆದರು. ಇದರಿಂದ ಮೊಹಮ್ಮದ್ ರಿಯಾಸ್ ಅಲ್ಲಿಂದ ನಿರ್ಗಮಿಸಿದರು.

ವೀಣಾ ವಿಜಯನ್‌ರ ವಿಚಾ ರಣೆಯ ಹಿನ್ನೆಲೆಯಲ್ಲಿ  ಇ.ಡಿ ಕಚೇರಿ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ವೀಣಾ ವಿಜಯನ್‌ರ ಮಾಲ ಕತ್ವದಲ್ಲಿರುವ ಎಕ್ಸಾಲೇಜಿಕಲ್ ಸಂಸ್ಥೆ ಮತ್ತು ಕಲ್ಲಿದ್ದಲು ವ್ಯವಹಾರ ಸಿ.ಎಂ.ಆರ್‌ಎಲ್ ಮಧ್ಯೆ ಅಕ್ರಮ ಹಣ ವರ್ಗಾವಣೆ ನಡೆದಿದೆಯೆಂಬುವುದು ಇ.ಡಿ ತನಿಖೆಯಲ್ಲಿ ಸ್ಪಷ್ಟಗೊಂಡಿರುವ ಹಿನ್ನೆಲೆಯಲ್ಲಿ  ಆ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ತಮ್ಮ ಕಚೇರಿ ಗೆ ಹಾಜರಾಗುವಂತೆ ವೀಣಾ ವಿಜಯನ್‌ರಿಗೆ ಇ.ಡಿ  ಸಮನ್ಸ್ ಜ್ಯಾರಿ ಗೊಳಿಸಿತ್ತು. ಆದರೆ ತನ್ನ ಬದಲು ತನ್ನ ವಕೀಲರನ್ನು ಹಾಜರುಪಡಿಸುವುದಾಗಿ  ವೀಣಾ ಬಳಿಕ ಇ.ಡಿಗೆ ತಿಳಿಸಿದ್ದಾರೆ.

ಅದು ಸಾಲದು ನೀವೇ ಖುದ್ದಾಗಿ ಹಾಜರಾಗಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಇ.ಡಿ  ಸ್ಪಷ್ಟಪ ಡಿಸಿತ್ತು. ಅದರಂತೆ ವೀಣಾ ಇಂದು ಇ.ಡಿ ಕಚೇರಿಯಲ್ಲಿ ಹಾಜರಾದರು.  ಇನ್ನೊಂದೆಡೆ ಎಂಆರ್‌ಎಲ್‌ನ ಜಂಟಿ  ಆಡಳಿತ ನಿರ್ದೇಶಕ   ಶರಣ್ ಎಸ್ ಕರ್ತ, ಅದರ ನಿರ್ದೇಶಕ ಜಯಕರ್ತ ಸೇರಿದಂತೆ  ಆ ಸಂಸ್ಥೆಯ ಹಲವರು  ಈ ಪ್ರಕರಣಕ್ಕೆ ಸಂಬಂಧಿಸಿ  ನಿನ್ನೆ ಇ.ಡಿ ಮುಂದೆ ಹಾಜರಾಗಿ ಅವರ ಹೇಳಿಕೆ ಗಳನ್ನು ಇ.ಡಿ ದಾಖಲಿಸಿಕೊಂಡಿತ್ತು.

RELATED NEWS

You cannot copy contents of this page