ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿ ಎದುರು ಕಲ್ಲಂಗೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ 2.30ರ ವೇಳೆ ನಾಲ್ಕು ಸರಣಿ ವಾಹನ ಅಪಘಾತಗಳು ನಡೆದಿದ್ದು, ಅದರಲ್ಲಿ ಓರ್ವ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ತಡೆಗೋಡೆಗೆ ಬಡಿದಿದೆ. ಆ ವೇಳೆ ಕಾರಿನ ಹಿಂದುಗಡೆಯಿಂದ ಬರುತ್ತಿದ್ದ ಲಾರಿ ಆ ಕಾರಿಗೆ ಢಿಕ್ಕಿ ಹೊಡೆದು ಕಾರು ಮತ್ತು ಲಾರಿಯ ಗಾಜು ಪುಡಿಗೈಯ್ಯಲ್ಪಟ್ಟಿದ್ದು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದೇ ವೇಳೆ ಆ ಲಾರಿಯ ಹಿಂದುಗಡೆಯಿಂದ ಬರುತ್ತಿದ್ದ ಕೊಲ್ಲೂರಿಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ನೋಂದಾಯಿತ ಬಸ್ ಆ ಲಾರಿಗೆ ಢಿಕ್ಕಿ ಹೊಡೆದು ಅದರ ಒಂದು ಭಾಗ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಅದೇ ದಾರಿಯಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ಬ್ರೇಕ್ ಹಾಕಿದಾಗ ಅದು ಕೂಡಾ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗಾಜುಗಳ ಮೇಲೆ ಬಿದ್ದಿದ್ದು ಅದರಿಂದ ಬೈಕ್ ಸವಾರರಲ್ಲಿ ಪ್ರತಿಯೋರ್ವರು ಗಾಯಗೊಂಡರು. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಆಕ್ಸಿಡೆಂಟ್ ಟೆಂಡರ್ ವಾಹನ ಹಾಗೂ ಅದರ ಇನ್ನೊಂದು ವಾಹನ ತಕ್ಷಣ ಬಗ್ಗೆ ನಡದ ಸ್ಥಳಕ್ಕೆ ಧಾವಿಸಿ ನೀರು ಹಾಯಿಸಿ ಒಡೆದು ಹೋಗಿದ್ದ ಬಸ್ಸಿನ ಗಾಜುಗಳನ್ನು ಪೂರ್ಣವಾಗಿ ತೆರವುಗೊಳಿಸಿದರು. ಆದರೆ ಅಪಘಾತದಿಂದ ನಜ್ಜುಗುಜ್ಜಾಗಿದ್ದ ಬಸ್ಸಿನ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗದೆ ಅದರೊಳಗಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗದಂತಾಯಿತು. ಅಗ್ನಿಶಾಮಕದಳ ಏಣಿ ಉಪಯೋಗಿಸಿ ಬಸ್ಸಿನ ತುರ್ತು ನಿರ್ಗಮನ ಬಾಗಿಲು ಮೂಲಕ ಪ್ರಯಾಣಿಕರನ್ನು ಸುರಕ್ಷಿತ ವಾಗಿ ಬಸ್ಸಿನಿಂದ ಹೊರಗಿಳಿಸಿದರು.
ಕಾಸರಗೋಡು ಅಗ್ನಿಶಾಮಕದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ವರ್ಗೀಸ್, ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ವೈಶಾಖ್ ಎಂ.ಎ, ಸಿರಾಜುದ್ದೀನ್ ಪಿ.ಸಿ, ಒ.ಕೆ. ಪ್ರಜಿತ್, ರಮೇಶ್, ಪ್ರಣವ್, ಹರಿಕುಮಾರ್, ಆನಂದು ಮತ್ತು ಹೋಮ್ ಗಾರ್ಡ್‌ಗಳಾದ ರಾಜೇಂದ್ರನ್ ಎ, ಸುಭಾಷ್ ಸಿ.ವಿ ಮೊದಲಾದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು.





