ಪತ್ವಾಡಿ- ಮೀಯಪದವು ರಸ್ತೆ ಶೋಚನೀಯ: ಸಂಚಾರಕ್ಕೆ ಸಂಕಷ್ಟ

ಉಪ್ಪಳ: ಮಂಗಲ್ಪಾಡಿ-ಮೀAಜ ಪಂಚಾಯತ್ ಸಂಗಮಿಸಿಸುವ ಉಪ್ಪಳದಿಂದ ಪತ್ವಾಡಿ-ಮೀಯಪದವು ಲೋಕೋಪಯೋಗಿ ಇಲಾಖೆ ರಸ್ತೆ ಅಲ್ಲಲ್ಲಿ ಹದಗೆಟ್ಟು ಶೋಚನೀಯÁವಸ್ಥೆಯಲ್ಲಿದೆ. ವಾಹನ ಸಂಚಾರ ದುಸ್ತರವಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಜಲ್, ಪತ್ವಾಡಿ, ಕಂಚಿಲ ಸಹಿತ ವಿವಿಧ ಕಡೆಗಳ ಹೊಂಡಗಳಲ್ಲಿ ನೀರು ಕಟ್ಟಿ ನಿಂತು ವಾಹನ ಸಂಚಾರದ ವೇಳೆ ಅಪಘಾತಕ್ಕೆ ಕಾರಣವಾಗುತ್ತಿದೆ. ಚರಂಡಿಯ ಅವ್ಯವಸ್ಥೆಯಿಂದ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಸ್ಥಳೀಯರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಗು ಪೊದೆಗಳು ತುಂಬಿಕೊAಡಿದೆ. ರಸ್ತೆ ಬದಿಗಳಲ್ಲÆ ಹೊಂಡಗಳು ಉಂಟಾಗಿ ವಾಹನಗಳಿಗೆ ಸೈಡು ನೀಡಲು ಸಾಧ್ಯವಾಗ ದಂತಹ ಪರಿಸ್ಥಿತಿ ಉಂಟಾಗಿದೆ. ಸಂಬAಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page