ಪುದುಕೋಳಿ ಸೇತುವೆ ಬಳಿ ನಿರಂತರ ತ್ಯಾಜ್ಯ ಉಪೇಕ್ಷೆ: ಸ್ಥಳೀಯರಿಂದ ಪ್ರತಿಭಟನೆ ನಿರ್ಧಾರ

ಬದಿಯಡ್ಕ: ನೀರ್ಚಾಲು- ಮಾನ್ಯ ರಸ್ತೆಯ ಪುದುಕೋಳಿ ಸೇತುವೆ ಬಳಿ ನಿರಂತರ ಶೌಚಾಲಯ ತ್ಯಾಜ್ಯ ಸಹಿತ ಮಾಲಿನ್ಯಗಳನ್ನು ತಂದೆಸೆಯುತ್ತಿದ್ದು, ಇದರ ವಿರುದ್ಧ ವಾರ್ಡ್ ಪ್ರತಿನಿಧಿಯ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪುದುಕೋಳಿ ಈಶ್ವರ ಭಟ್ ಅವರ ಮನೆಯಲ್ಲಿ ಸೇರಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಪೊಲೀಸರಿಗೆ ದೂರು ನೀಡುವುದು, ನಾಗರಿಕರ ನೇತೃತ್ವದಲ್ಲಿ ರಾತ್ರಿ ಗಸ್ತು ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಯಿತು.

ವಾರ್ಡ್ ಪ್ರತಿನಿಧಿ ರಜನಿ ಸಂದೀಪ್ ಉಪಸ್ಥಿತರಿದ್ದರು. ಸುಮ ಈಶ್ವರ ಭಟ್, ಲಕ್ಷ್ಮಿ ಐ, ಜಯೇಶ್ ಟಿ.ಎನ್, ಕೊರಗಪ್ಪ ನಾಯ್ಕ್, ಕೃಷ್ಣ ನಾಯ್ಕ್, ಮುರಳೀಕೃಷ್ಣ ಪಿ, ಶಂಕರನಾರಾಯಣ ಭಟ್, ಸುಲೋಚನ, ಕಾವೇರಿ, ಗಂಗಾಧರ ಕೆ, ವಾಮನ ನಾಯ್ಕ್, ವೆಂಕಟೇಶ ಸಿ.ಎಚ್, ಸರೋಜಿನಿ ಸಿ.ಎಚ್, ಈಶ್ವರಿ ಎಂ, ಈಶ್ವರ ಭಟ್ ಮಾತನಾಡಿದರು.

RELATED NEWS

You cannot copy contents of this page