ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಾಟ

ಮುಳ್ಳೇರಿಯ: ಹಟ್ಟಿಯ ಸಮೀಪ ಕಟ್ಟಿ ಹಾಕಿದ್ದ ಗರ್ಭಿಣಿ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿರುವುದಾಗಿ ದೂರಲಾಗಿದೆ. ಮಲ್ಲ ನಿವಾಸಿ ಎಂ. ವಿಜಯಲಕ್ಷ್ಮಿ ಎಂಬವರ ಹಸುವನ್ನು ಕಳವುಗೈಯ್ಯಲಾ ಗಿದೆ. ಮೊನ್ನೆ ಮುಂಜಾನೆ ಕಾರಿನಲ್ಲಿ ತಲುಪಿದ ಇಬ್ಬರು ಹಸುವನ್ನು ಕಳವುಗೈದಿರು ವುದಾಗಿ ಆರೋಪಿಸಲಾಗಿದೆ.  ಕಾರಿನ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಾರಿನ ನಂಬ್ರಪ್ಲೇಟ್ ನಕಲಿಯಾಗಿದ್ದು, ಇದರಿಂದ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತನಿಖೆ ಮುಂದುವರಿಯುತ್ತಿದೆಯೆಂದು ಆದೂರು ಪೊಲೀಸರು ತಿಳಿಸಿದ್ದಾರೆ.  ವಿಧವೆಯಾದ ವಿಜಯಲಕ್ಷ್ಮಿ ಹಸು ಸಾಕಿ ಲಭಿಸುವ ಅತ್ಯಲ್ಪ ಆದಾಯದಿಂದ  ಪುತ್ರಿ ಸಹಿತ ಕುಟುಂಬದ  ಜೀವನ ಸಾಗಬೇಕಾಗಿದೆ. ಇದೀಗ ಹಸು ಕಳವಿಗೀಡಾಗಿರುವು ದರಿಂದ ತಾಯಿ ಹಾಗೂ ಮಗಳು ಭಾರೀ ಚಿಂತೆಯಲ್ಲಿದ್ದಾರೆ.

RELATED NEWS

You cannot copy contents of this page