ಬೆಲೆಯೇ ಇಲ್ಲದ ಕುಂಬಳೆ ಪಂಚಾಯತ್ ತೀರ್ಮಾನ :ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ

ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ತೀರ್ಮಾನಗಳಿಗೆ ಬೆಲೆ ಇಲ್ಲವೆಂದು ಸ್ಥಳೀಯರು ದೂರುತ್ತಾರೆ. ಕುಂಬಳೆಯ ಟ್ರಾಫಿಕ್ ಪರಿಷ್ಕಾರದಂಗ ವಾಗಿ ಮಾಜಿ ಅಧ್ಯಕ್ಷ ಬಸ್ ಪಾರ್ಕಿಂಗ್ ಹಲವು ಕಡೆಗಳಿಗೆ ಬದಲಾಯಿಸಿದ್ದರು. ಇದನ್ನು ಹೆಚ್ಚು ಕಾಲ ಬಾಳಲು ಬಿಡದೆ ಹೊಸ ಅಧ್ಯಕ್ಷರು ಅದನ್ನು ಹಳೆಯ ಬಸ್ ನಿಲ್ದಾಣಕ್ಕೆ ಬದಲಾಯಿಸಲು ತೀರ್ಮಾನಿಸಿದರು. ಆದರೆ ಈ ತೀರ್ಮಾನ ಕಡತದಲ್ಲಿಯೇ ಉಳಿದುಕೊಂಡ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಆರಂಭಿಸಿದವು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಬಾರದೆಂದು ಪೊಲೀಸರು- ಆರ್‌ಟಿಒ ಅಧಿಕಾರಿಗಳು ಪ್ರದರ್ಶಿಸಿದ ಫ್ಲೆಕ್ಸ್ ಬ್ಯಾನರ್‌ನ ಅಡಿಯಲ್ಲಿಯೇ ಈ ರೀತಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸ ಲಾಗುತ್ತಿದೆ. ಪಂಚಾಯತ್ ಮಾತು ಪಾಲಿಸದಿರುವುದರನ್ನು ಪ್ರತಿಭಟಿಸಿ ಖಾಸಗಿ ವಾಹನ ನಿಲುಗಡೆ ಮೂಲಕ ಸ್ಥಳೀಯರು ಪ್ರತಿಭಟನೆ ವ್ಯಕ್ತಪಡಿಸುತ್ತಿರು ವುದಾಗಿ ಆರೋಪವಿದೆ. ಸೀತಾಂಗೋಳಿ, ಬದಿಯಡ್ಕ, ಪೆರ್ಮುದೆ, ಮುಳ್ಳೇರಿಯ, ಪೆರ್ಲ ಮೊದಲಾದ ಸ್ಥಳಗಳಿಗೆ ತೆರಳುವ ಬಸ್‌ಗಳು ಹಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಪುನಃ ಪ್ರಯಾಣ ಅಲ್ಲಿಂದಲೇ ಆರಂಭಿಸಬೇಕೆಂದು ಪಂಚಾಯತ್ ನಿರ್ದೇಶಿಸಿತ್ತು. ಈ ನಿರ್ದೇಶವನ್ನು ಬಸ್ ನೌಕರರು, ಮಾಲಕರ ಒಂದು ವಿಭಾಗ, ವ್ಯಾಪಾರಿಗಳ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿದ್ದರು. ಈಗ ಒಂದು ವಿಭಾಗ ವ್ಯಾಪಾರಿಗಳು ಕುಂಬಳೆ ಮೂಲಕವಿರುವ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಬೇಕೆಂಬ ಬೇಡಿಕೆಯೊಂದಿಗೆ ರಂಗಕ್ಕಿಳಿದಿದ್ದಾರೆ.

RELATED NEWS

You cannot copy contents of this page