ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಬೇಕು- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಖಾಸಗಿ ಬಸ್ ಉದ್ದಿಮೆಯನ್ನು ಸರಕಾರ ಸಂರಕ್ಷಿಸ ಬೇಕೆಂದು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಗಳಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಕರ್ಯ ಏರ್ಪಡಿಸಿ, ಕೋಟ್ಯಂತರ ರೂಪಾಯಿ ಸರಕಾರಕ್ಕೆ ಮುಂಚಿತವಾಗಿ ತೆರಿಗೆ ನೀಡುವ ಖಾಸಗಿ ಬಸ್ ಉದ್ದಿಮೆ ಭಾರೀ ಸಂದಿಗ್ಧತೆಯಲ್ಲಿದೆ. ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಮಂಜೂರು ಮಾಡಿದರೆ ಖಾಸಗಿ ಬಸ್ ಉದ್ದಿಮೆ ಇನ್ನಷ್ಟು ಸಂದಿಗ್ಧತೆಗೆ ತಲುಪಲಿದೆ. ಅತ್ಯಲ್ಪ ಸಂಗ್ರಹವಾಗುವ ಆದಾಯದಿಂದ ಬಸ್‌ಗಳಿಗೆ ಡೀಸೆಲ್ ತುಂಬಿಸಲು, ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿಗೆ ಬಸ್ ಉದ್ದಿಮೆ ತಲುಪಲಿದೆ ಎಂದು ಫೆಡರೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ಸಂರಕ್ಷಣೆಯನ್ನು ಖಚಿತಪಡಿಸಿದ ಬಳಿಕ ಮಾತ್ರವೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಂಜೂರು ಮಾಡಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page