ಹೊಸಂಗಡಿ ರೈಲ್ವೇ ಗೇಟ್ ಮುಚ್ಚುಗಡೆ ದುರಸ್ತಿ ಕಾಮಗಾರಿಗೆ ಚಾಲನೆ

ಮಂಜೇಶ್ವರ: ಹಲವು ಸಮಯಗಳಿಂದ ಸಮಸ್ಯೆ ಕಂಡುಬರುತ್ತಿದ್ದ ಹೊಸಂಗಡಿ ರೈಲ್ವೇ ಗೇಟ್ ದುರಸ್ತಿಗೊಳಿಸಲು ಇಂದು ಬೆಳಿಗ್ಗಿನಿಂದ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂಲಕ ವಾಹನ ಸಂಚಾರನವನ್ನು ನಿಷೇಧಿಸಲಾಗಿದೆ. ಇನ್ನು ಸಾಮಾನ್ಯ ಒಂದು ವಾರದವರೆಗೆ ಈ ಮೂಲಕ ಮಂಜೇಶ್ವರ ಒಳಪೇಟೆಗೆ ವಾಹನ ಸಂಚರಿಸಲು ಮಂಜೇಶ್ವರದ ಮೂಲಕ ಇತರ ಮಾರ್ಗವನ್ನು ಬಳಸಬೇಕಾಗಿದೆ.

ಇಂದು ಬೆಳಿಗ್ಗೆ ರೈಲ್ವೇ ಗೇಟ್ ಮುಚ್ಚಿದ್ದು, ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಲಾಗಿದೆ. ಗೇಟ್ ಬಳಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ದುರಸ್ತಿ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಹಿಂದೆ ಕಳೆದ ೫ರಿಂದ ೧೦ರ ವರೆಗೆ ಮುಚ್ಚುಗಡೆ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ವಿವಿಧ ಕಾರಣದಿಂದ ಕಾಮಗಾರಿ ಆರಂಭ ಮುಂದೂಡಲಾಗಿದ್ದು, ಇಂದಿನಿಂದ ಆರಂಭಗೊಂಡಿದೆ.

ಮಂಜೇಶ್ವರ ಒಳಪೇಟೆಯಲ್ಲಿ ಹಲವಾರು ಸರಕಾರಿ ಕಚೇರಿ, ಶಾಲೆ, ಆರಾಧನಾಲಯಗಳಿದ್ದು, ಇಲ್ಲಿಗೆ ಸಂಚರಿಸಬೇಕಿದ್ದರೆ ಇನ್ನು ಒಂದಷ್ಟು ದಿನ ತ್ರಾಸಪಡಬೇಕಾಗಿದೆ. ಇನ್ನು ನವರಾತ್ರಿ ಸಹಿತ ವಿವಿಧ ಹಬ್ಬಗಳು ಆರಂಭಗೊಳ್ಳುವ ವೇಳೆ ಗೇಟ್ ಮುಚ್ಚಿರುವುದು ಜನರಿಗೆ ಸಮಸ್ಯೆ ತಂದೊಡ್ಡಲಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕೆಲಸ ಮುಗಿಸಿ ಗೇಟ್ ತೆರೆದು ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy contents of this page