ಕುಂಬಳೆ: ಕೇರಳ ರಾಜ್ಯ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 30 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ಸನ್ನು ಪೊಲೀಸ್ ಠಾಣೆಗೆ ತಲುಪಿಸಿ ಎಲ್ಲಾ ಪ್ರಯಾಣಿಕ ರನ್ನು ಪರಿಶೀಲಿಸಿದರೂ ಹಣ ಪತ್ತೆಹಚ್ಚಲಾಗಲಿಲ್ಲ. ನಿನ್ನೆ ಸಂಜೆ 6 ಗಂಟೆಗೆ ಕಾಸರಗೋಡಿನಿಂದ ಮಂಗ ಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಕಾಸರಗೋಡಿನಿಂದ ಪ್ರಯಾಣಿಸಿದ ಮೊಗ್ರಾಲ್ ಪುತ್ತೂರು ನಿವಾಸಿಯಾದ ಮಹಿಳೆಯ ಹಣ ಕಳವಿಗೀಡಾಗಿದೆ. ಬಸ್ ಚೌಕಿಗೆ ತಲುಪಿದೊಡನೆ ಮಹಿಳೆ ಪರ್ಸ್ ಪರಿಶೀಲಿಸಿದಾಗ ಅದರಲ್ಲಿದ್ದ 30 ಸಾವಿರ ರೂಪಾಯಿ ನಾಪತ್ತೆಯಾಗಿ ತ್ತೆನ್ನಲಾಗಿದೆ. ಈ ಬಗ್ಗೆ ಮಹಿಳೆ ಬಸ್ನ ನಿರ್ವಾಹಕನಲ್ಲಿ ತಿಳಿಸಿದ್ದು, ಇದರಿಂದ ಬಸ್ಸನ್ನು ನೇರ ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಲಾಯಿತು. ಬಸ್ನಲ್ಲಿ ಸುಮಾರು 70ರಷ್ಟು ಮಹಿಳಾ ಪ್ರಯಾಣಿಕರು ಹಾಗೂ ಇಬ್ಬರು ಪುರುಷರಿದ್ದರು. ಮಹಿಳೆಯ ರನ್ನು ಮಹಿಳಾ ಪೊಲೀಸರು ಪರಿಶೀಲಿಸಿದ್ದು, ಆದರೆ ಹಣ ಪತ್ತೆಹಚ್ಚ ಲಾಗಲಿಲ್ಲ. ಇದರಿಂದ ತಪಾಸಣೆ ಮುಗಿಯುವಾಗ ರಾತ್ರಿ 8 ಗಂಟೆಯಾಗಿದ್ದು, ಅನಂತರವೇ ಬಸ್ ಮಂಗಳೂರಿನತ್ತ ಪ್ರಯಾಣಿಸಿದೆ. ಕಾಸರಗೋಡಿನಿಂದ ಚೌಕಿ ಮಧ್ಯೆ ಹಣ ಕಳವು ನಡೆದಿರಬಹುದೆಂದೂ, ಕಳವು ಗೈದ ವ್ಯಕ್ತಿ ಯಾವುದಾದರೂ ಸ್ಟಾಪ್ನಲ್ಲಿ ಇಳಿದಿರಬಹುದೆಂದು ಅಂದಾಜಿ ಸಲಾಗಿದೆ. ಚಿನ್ನಾಭರಣ ವನ್ನು ಅಡವಿರಿಸಿ ಲಭಿಸಿದ ಹಣ ಸಹಿತ ಮನೆಗೆ ಮರಳುತ್ತಿದ್ದ ವೇಳೆ ಮಹಿಳೆಯ ಬ್ಯಾಗ್ನಲ್ಲಿದ್ದ ಹಣ ಕಳವಿಗೀಡಾಗಿದೆಯೆಂದು ತಿಳಿಸಲಾಗಿದೆ.






