ಕಾಸರಗೋಡು ಶ್ರೀಕೃಷ್ಣ ಜನ್ಮಾಷ್ಟಮಿ: ಮಹೋತ್ಸವ ಸಮಿತಿ ರಚನೆ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೆ. 4ರಂದು ಜರಗಲಿರುವ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಸಮಿತಿ ರೂಪೀಕರಣ ಸಭೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ನೂತನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ್ ಕೆ.ಎನ್, ಉಪಾಧ್ಯಕ್ಷರಾಗಿ ಮೋದಕ್ ರಾಜ್, ಶ್ರೀವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕುಂಟಾರು, ಜತೆಕಾರ್ಯದರ್ಶಿಗಳಾಗಿ ವಸಂತ್ ಕೆರೆಮನೆ, ಪ್ರಶಾಂತಿ ನೆಲ್ಲಿಕುಂಜೆ, ಕೋಶಾಧಿಕಾರಿಯಾಗಿ ಮೋಹನ್ ರಾಜ್ ಕಾಳ್ಯಂಗಾಡ್, ಸ್ಥಾಯೀ ಸಮಿತಿ ಪದಾಧಿಕಾರಿಗಳಾದ ರವಿ ಕೇಸರಿ, ರಾಮಕೃಷ್ಣ ಹೊಳ್ಳ, ಗುಣಪಾಲ ಅಮೈ, ಸತೀಶ್ ಕಾಮತ್, ಕಿಶೋರ್ ಕುಮಾರ್ ಎಸ್.ವಿ.ಟಿ ಉಪಸ್ಥಿತರಿದ್ದರು. ಸಮಿತಿ ಸದಸ್ಯರಾಗಿ ಅಡ್ವಕೇಟ್ ಸುರೇಶ್, ವರಪ್ರಸಾದ್ ಕೋಟೆಕಣಿ, ಉಷಾ ಸುರೇಶ್, ಗಣೇಶ್ ಬೀರಂತಬೈಲ್, ದಯಾನಂದ ಕೊಳ್ಕೆಬೈಲ್, ಪ್ರೇಮಾ ಪುರಂದರ, ಸವಿತಾ ಕಿಶೋರ್, ಶ್ರೀಲತಾ ಟೀಚರ್, ಅದಿತಿ ಮುಂತಾದವರನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page