ಬೀಗ ಜಡಿದ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ, 40 ಸಾವಿರ ರೂ. ಕಳವು: ತನಿಖೆ ಆರಂಭ

ಹೊಸದುರ್ಗ: ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಐದೂವರೆ ಪವನ್ ಚಿನ್ನಾಭರಣ ಹಾಗೂ 4೦,೦೦೦ ರೂಪಾಯಿಗಳನ್ನು ದೋಚಿದ ಘಟನೆಗೆ ಸಂಬಂಧಿಸಿ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.   ಕರಿಂದಳ ಕಾಲಿಚ್ಚಾಮರ ಮೀರ್ಕಾನಂತಟ್ಟ್‌ನ ಕೃಷಿಕ ಇರಟ್ಟ ಮುಂಡಕ್ಕಲ್ ಜೋರ್ಜ್ ಸೆಬಾಸ್ಟಿಯನ್ ಎಂಬವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ.  ಸೋಮವಾರ ಸಂಜೆ ೪ರಿಂದ ಮಂಗಳವಾರ ಬೆಳಿಗ್ಗೆ ೬.೩೦ರ ಮಧ್ಯೆ ಕಳವು ನಡೆದಿರು ವುದಾಗಿ ಸಂಶಯಿಸಲಾಗುತ್ತಿದೆ. ಮನೆಯವರು ಬಾಗಿಲು ಮುಚ್ಚಿ ಮಗಳ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ  ಮನೆಯ ಬಾಗಿಲು ತೆರೆದಿಟ್ಟಿರುವುದನ್ನು ಕಂಡ ನೆರೆಮನೆಯವರು ನೀಡಿದ ಮಾಹಿತಿಯಂತೆ ಮನೆಯವರು ಮರಳಿ ಪರಿಶೀಲಿಸಿದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ. ಬಳಿಕ ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

You cannot copy contents of this page