ಕಾರಿಗೆ ಕಿಚ್ಚಿಟ್ಟು ಸಾಮೂಹಿಕ ಆತ್ಮಹತ್ಯಾ ಯತ್ನ: ಸಾವಿಗೆ ಮುಂಚಿತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ವೀಡಿಯೋ ಬಗ್ಗೆ ಪೊಲೀಸ್ ತನಿಖೆ

ಮಾನಂತವಾಡಿ: ಕುಟುಂಬ ಸಹಿತ ಸಂಚರಿಸುತ್ತಿದ್ದ ಕಾರಿಗೆ ಕಿಚ್ಚಿರಿಸಿ ಸಾಮೂಹಿಕ ಆತ್ಮಹತ್ಯೆಗೈಯ್ಯಲಿರುವ ಪತಿಯ ಯತ್ನ ಗಮನಕ್ಕೆ ಬ ರಲಿಲ್ಲವೆಂದು ಮೃತಪಟ್ಟ ಸಜೀರ್‌ರ ಪತ್ನಿ ನಜ್ಮತ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಕೋಟದಲ್ಲಿ ವ್ಯಾಪಾರಿಯಾದ ಕಣ್ಣೂರು ನಿವಾಸಿ ಸಜೀರ್ ಹಾಗೂ ಕುಟುಂಬ ಊರಿಗೆ ಮರಳುತ್ತಿದ್ದ ಪ್ರಯಾಣ ಮಧ್ಯೆ ಮಾನಂತವಾಡಿಯಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಲಾಗಿದೆ. ಸಜೀರ್ ಘಟನಾ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡ ಪತ್ಮಿ ನಜ್ಮತ್‌ರ ಹೇಳಿಕೆ ದಾಖಲಿಸುತ್ತಿದ್ದ ಮಧ್ಯೆ ಆಕೆ ಈ ವಿಷಯ ಪೊಲೀಸರಲ್ಲಿ ತಿಳಿಸಿ ದ್ದಾರೆ. ಕಣ್ಣೂರಿಗೆ ತೆರ ಳುವ ಮಧ್ಯೆ  ನಜೀರ್ ಪೆಟ್ರೋಲ್ ಖರೀದಿಸಿ ರುವು ದೆಂದು ನಜ್ಮತ್ ತಿಳಿಸಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಇವರಿಂದ ಹೇಳಿಕೆಯನ್ನು ಇನ್ನೊಮ್ಮೆ ದಾಖಲಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಮುಂಚಿತ ಸಜೀರ್ ವೀಡಿಯೋದಲ್ಲಿ ಆರೋ ಪ ಮುಂದಿಟ್ಟ ಮಾನಂತವಾಡಿ ಯಲ್ಲಿ ವ್ಯಾಪಾರ ನಡೆಸುವ ಇ.ಸಿ. ಬಾಪು ಹಾಗೂ ಕಲ್ಲಿಕೋಟೆಯ ರಫೀಕ್‌ನನ್ನು ಪ್ರಶ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.ಇದೇ ವೇಳೆ ಸಜೀರ್‌ರ ಆರೋಪಗಳನ್ನು ಬಾಪು ಅಲ್ಲಗಳೆದಿದ್ದ್ದು ತಾನು ನಿರಪರಾಧಿ ಎಂದಿದ್ದಾರೆ. ಸಜೀರ್‌ಗೆ ಕಟ್ಟಡ ಬಾಡಿಗೆಗೆ ನೀಡಿರುವುದಾಗಿಯೂ ಆದರೆ ಹಲವು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ ವೆಂದು ಬಾಪು ಸಾಮಾಜಿಕ ಜಾಲತಾಣದಲ್ಲಿ  ಬಹಿರಂಗಪಡಿಸಿದ್ದಾರೆ. ಮೂರು ವರ್ಷದಿಂದ ನಾನು ಅಂಗಡಿ ನಡೆಸುತ್ತಿರುವುದಾಗಿಯೂ ಸಜೀರ್‌ಗೆ 25 ಲಕ್ಷ ರೂ. ನೀಡಿರುವುದಾಗಿಯೂ ಜಾಲತಾಣದಲ್ಲಿ ಬಹಿರಂಗಪಡಿಸಿದ ಸಂದೇಶದಲ್ಲಿ ತಿಳಿಸಲಾಗಿದೆ. ಬಾಪುನೊಂ ದಿಗಿನ ಆರ್ಥಿಕ ವ್ಯವಹಾರ ದ ವಿವಾದವೇ  ಆತ್ಮಹತ್ಯೆಗೆ ಕಾರಣವೆಂದು  ಸಾವಿಗೂ ಮುಂಚೆ ಸಜೀರ್ ಬಹಿರಂಗಪಡಿಸಿದ ವೀಡಿಯೋ ಸಂದೇಶದಲ್ಲಿ ಹೇಳಿದ್ದರು.

RELATED NEWS

You cannot copy contents of this page