ಟೈಲರ್ಸ್ ಅಸೋಸಿಯೇಶನ್ ಉಪ್ಪಳ ಯೂನಿಟ್ ಸಭೆ

ಉಪ್ಪಳ: ಕೇರಳ ಸ್ಟೇಟ್ ಟೈರ‍್ಸ್ ಅಸೋಶಿಯೇಶನ್ (ಕೆ.ಎಸ್ ಟಿ.ಎ) ಉಪ್ಪಳ ಯೂನಿಟ್ ಸಭೆ ಇತ್ತೀಚೆಗೆ ಉಪ್ಪಳದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ದಯಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ರಾಜ್ಯ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ವಾರ್‌ರಿಗೆ ನುಡಿನಮನ ಸಲ್ಲಿಸಲಾಯಿತು. ಸದಸ್ಯತನವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ವಿತರಿಸಿದರು. ತಾಲೂಕು ಉಪಾದ್ಯಾಕ್ಷ ಕೇಶವ ಮಯ್ಯ, ಸದಸ್ಯರಾದ ಕುಸುಮಾವತಿ, ಚಂದ್ರಶೇಖರ, ಹಾಗೂ ಯೂನಿಟ್ ಸದಸ್ಯರು ಭಾಗವಹಿಸಿದರು. ತಾಲೂಕು ಮಾಜಿ ಸದಸ್ಯ ಪುರುಷೆÆÃತ್ತಮ ವಂದಿಸಿದರು. ಕಾರ್ಯದರ್ಶಿ ಸುರೇಖ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಮೋಹನ. ಪಿ.ಕೆ ಲೆಕ್ಕ ಪತ್ರ ಮಂಡಿಸಿದರು.

RELATED NEWS

You cannot copy contents of this page