ಒಂದೇ ಊರಿನ ಇಬ್ಬರು ವ್ಯಾಪಾರಿಗಳು ಒಂದೇ ದಿನ ನಿಧನ

ಮೊಗ್ರಾಲ್: ಒಂದೇ ಊರಿನಲ್ಲಿ ಜನಿಸಿ  ಇಬ್ಬರು ದೀರ್ಘ ಕಾಲ ಗೋವಾದಲ್ಲಿ ಹೋಟೆಲ್ ಗಳನ್ನು ನಡೆಸಿ ಅಲ್ಲಿಂದ ಸಮಾನ ಸಮಯದಲ್ಲಿ ಊರಿಗೆ ಹಿಂತಿರುಗಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಮಧ್ಯೆ ಒಂದೇ ದಿನ ನಿಧನ ಹೊಂದಿದ ಘಟನೆ ಸಂಭವಿಸಿದೆ. ಈ ನಿಧನ ಸ್ಥಳೀಯರಲ್ಲಿ ದುಃಖ ಹಾಗೂ ಮರಣದ ಆಕಸ್ಮಿಕತೆ  ವಿಸ್ಮಯ ಮೂಡಿಸಿದೆ. ಮೊಗ್ರಾಲ್ ನಾಂಗಿ ಹೌಸ್‌ನ ಮುಹಮ್ಮದ್ ಗೋವಾ (80) ನಿನ್ನೆ ನಿಧನ ಹೊಂದಿದ್ದರು. ಮಧ್ಯಾಹ್ನದ ವೇಳೆ ನಾಂಗಿ ರಸ್ತೆಯ ನಾಂಗಿ ಹೌಸ್‌ನ ಎನ್.ಎಂ. ಇಸ್ಮಾಯಿಲ್ (82) ಕೂಡಾ ನಿಧನ ಹೊಂದಿದರು. ಗೋವಾದಲ್ಲಿ ಇವರಿಬ್ಬರು ಒಂದೇ ಕಾಲಘಟ್ಟದಲ್ಲಿ ಹಲವು ವರ್ಷಗಳ ಕಾಲ ಹೋಟೆಲ್ ವ್ಯಾಪಾರಿಗಳಾಗಿದ್ದರು.

ಮೃತ ಮುಹಮ್ಮದ್ ಪತ್ನಿ ಬೀಫಾತಿಮ, ಮಕ್ಕಳಾದ ಅಬ್ದುಲ್ಲ, ಸಿದ್ದಿಕ್, ರೌಫ್, ಹಂಸ ಗೋವಾ, ಮೈಮೂನ, ಆಯಿಷಾ, ರಮ್ಲ, ಅಳಿಯಂದಿರಾದ ಮುಹಮ್ಮದ್ ಮುಗು, ಶರೀಫ್ ಪುತ್ತಿಗೆ, ಖಾದರ್ ಕೊಡ್ಯಮ್ಮೆ, ಸೊಸೆಯಂದಿರಾದ ಸಾಜಿತ ಕೋಟ, ಸಾಬಿರ, ನಜೀಮ, ಫಂಸೀನ ಪೆರುವಾಡ್, ಸಹೋದರ  ಅಬ್ದುಲ್ ರಹ್ಮಾನ್, ಸಹೋದರಿ ಸೈನಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತ ಎನ್.ಎಂ. ಇಸ್ಮಾಯಿಲ್ ಪತ್ನಿ ಆಯಿಷಾ, ಮಕ್ಕಳಾದ ಮುಹಮ್ಮದ್ ಖಾದರ್, ಕುಬ್ರಾ, ಸುಹರಾ, ಮಿಸ್ರಿಯ, ಅಳಿಯಂದಿರಾದ ಅಶ್ರಫ್, ಸಿದ್ದೀಕ್, ಇಬ್ರಾಹಿಂ, ಫೈಸಲ್, ಸೊಸೆ ರುಬೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಮೊಗ್ರಾಲ್ ವಲಿಯ ಜುಮಾ ಮಸೀದಿ ಅಂಗಣದಲ್ಲಿ ನಡೆಯಿತು.

You cannot copy contents of this page