ಯುಡಿಎಫ್ ಅಭ್ಯರ್ಥಿಯಿಂದ ವಿವಿಧ ಚರ್ಚ್‌ಗಳಿಗೆ ಸಂದರ್ಶನ

ಕಾಸರಗೋಡು:  ಕಾಸರಗೋಡು ವಿಧಾಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರು ಗರಿಗಳ ರವಿವಾರದ ಅಂಗವಾಗಿ ನಿನ್ನೆ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಶುಭಾಶಯ ತಿಳಿಸಿದರು.  ಬೇಳ ಅವರ್ ಲೇಡಿ ಆಫ್ ಡೋಲರ್ಸ್ ಚರ್ಚ್‌ಗೆ ಭೇಟಿ ನೀಡಿ ಫಾದರ್ ಸ್ಟ್ಯಾನಿ ಪೆರೇರ, ಬದಿಯಡ್ಕ ಸೈಂಟ್ ಮೇರೀಸ್ ಚರ್ಚ್‌ನ ಫಾದರ್ ಚಾಕೋ ಕುಡಿಪರಂಬಿಲ್, ಉಕ್ಕಿನಡ್ಕ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ  ಫಾದರ್ ಸುನಿಲ್ ಮಿರಾಂಡ ಮೊದಲಾದವರನ್ನು  ಭೇಟಿ ನೀಡಿ ಶುಭಾಶಯ ಕೋರಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಮಾಹಿನ್ ಕೇಳೋಟ್, ಮೂಸಾ ಬಿ ಚೆರ್ಕಳ, ಅನ್ವರ್ ಓಝೋನ್, ಶ್ಯಾಮ್ ಪ್ರಸಾದ್ ಮಾನ್ಯ, ಅಬ್ದುಲ್ಲ ಚಾಲ್ಕರ, ಹಮೀದ್ ಕೆಡೆಂಜಿ, ಅನಸ್ ಎದುರ್ತೋಡು ಮೊದಲಾದವರು ಅಭ್ಯರ್ಥಿಯೊಂದಿಗಿದ್ದರು.

RELATED NEWS

You cannot copy contents of this page