ಚೆನ್ನೈ: ಪ್ರೀತಿಸುವಂತೆ ಒತಾ ಯಿಸಿ ಯುವಕ ನಿರಂತರ ಕಿರುಕುಳ ನೀಡುತ್ತಿದ್ದುದನ್ನು ಸಹಿಸಲಾಗದೆ ಯುವತಿ ಆತ್ಮಹತ್ಯೆ ಮಾಡಿಕೊಂ ಡಿದ್ದು, ಅದರ ಬೆನ್ನಲ್ಲೇ ಯುವಕನನ್ನು ಸಂಬಂಧಿಕರು ಹೊಡೆದು ಕೊಂದ ಘಟನೆ ಕನ್ಯಾಕುಮಾರಿ ಜಿಲ್ಲೆಯ ನಾಗರ್ ಕೋವಿಲ್ ಸಮೀಪ ಕೊಟ್ಟಾರಂ ಪೆರುವಿಳ ಎಂಬಲ್ಲಿ ನಡೆದಿದೆ. ಕೊಟ್ಟಾರಂ ಪೆರುವಿಳ ನಿವಾಸಿ ಜ್ಞಾನಶೆಲ್ವನ್ ಎಂಬವರ ಪುತ್ರಿ ಏಂಜಲ್ (26) ಆತ್ಮಹತ್ಯೆ ಮಾಡಿ ಕೊಂಡ ಯುವತಿಯಾಗಿದ್ದಾಳೆ. ಯುವತಿಯ ನೆರೆ ಮನೆ ನಿವಾಸಿ ಯಾದ ಆಂಟನಿರಾಜು (30) ಎಂ ಬಾತ ಕೊಲೆಗೀಡಾದ ಯುವಕನಾಗಿ ದ್ದಾನೆ. ಈ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಏಂಜಲ್‌ಳ ಸಂಬಂಧಿಕರಾದ ರವಿ ಶೆಲ್ವನ್ (56), ಏಶುನೇಶ ಶೆಲ್ವನ್ (58), ಸಹೋದರರಾದ ಬೆವಿನ್ (26), ಬೆನಿಸ್ (26), ವಿನಿಸ್ (22) ಎಂಬಿವರು ಸೆರೆಗೀಡಾದವರಾಗಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ ಏಂಜಲ್‌ಳನ್ನು ಆಂಟನಿ ರಾಜು ನಿರಂತರ ಹಿಂಬಾಲಿಸಿ ಉಪ ಟಳ ನೀಡುತ್ತಿದ್ದನೆಂದು ದೂರಲಾಗಿದೆ. ಈತನ ಉಪಟಳವನ್ನು ಸಹಿಸಲಾಗದೆ ಕಳೆದ ತಿಂಗಳು ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕನ್ಯಾ ಕುಮಾರಿ ಪೊಲೀಸರು ಆಂಟನಿ ರಾಜು ನನ್ನು ಬಂಧಿಸಿದ್ದರೂ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ದ್ದರು. ಅನಂತರವೂ ಈತ ಕಿರುಕುಳ ಮುಂದುವರಿಸಿದ್ದಾನೆನ್ನಲಾಗಿದೆ. ಏಂಜಲ್ ಆದಿತ್ಯವಾರ ಮಧ್ಯಾಹ್ನ ಕೊಠಡಿಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಿಷಯ ತಿಳಿದು ನಾಗರಿಕರು ಹಾಗೂ ಸಂಬಂ ಧಿಕರು ಅಲ್ಲಿಗೆ ತಲುಪಿದ ಹೊತ್ತಿನಲ್ಲೇ ಆಂಟನಿ ರಾಜು ಕೂಡಾ ಅಲ್ಲಿಗೆ ತಲುಪಿದ್ದನು. ಯುವತಿಯ ಸಾವಿಗೆ ಕಾರಣನಾದ ಈತನನ್ನು ಕಂಡೊಡನೆ ಕುಪಿತರಾದ ಸಂಬಂಧಿಕರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ತಲೆಗೆ ಹೊಡೆದುದರಿಂದ ಗಂಭೀರ ಗಾಯಗೊಂಡಿರುವುದೇ ಆಂಟನಿ ರಾಜು ಸಾವಿಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.







