ಆಸ್ಪತ್ರೆಗೆ ಹೋದ ಯುವತಿ ನಾಪತ್ತೆ

ಕುಂಬಳೆ: ಯುವತಿ ನಾಪತ್ತೆಯಾದ ಬಗ್ಗೆ ಪತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಲಪ್ಪುರಂ ತಿರೂರಂಗಾಡಿ ಚೆಮ್ಮಾಡ್ ಕುನ್ನುಮೇಲ್ ಹೌಸ್‌ನ  ಮನ್ಸೂರ್ ಅಲಿ ಎಂಬವರ ಪತ್ನಿ ಹಾಗೂ ಕಯ್ಯಾರು ಗ್ರಾಮದ ಸುಬ್ಬಯ ಕಟ್ಟೆ ನಿವಾಸಿ  ಫಾತಿಮತ್ ಜುಹರಾ (27) ನಾಪತ್ತೆಯಾದ ಯುವತಿ.  ಮೇ 2ರಂದು ಬೆಳಿಗ್ಗೆ 10.30ಕ್ಕೆ ಸುಬ್ಬಯ್ಯಕಟ್ಟೆಯಿಂದ ಕುಂಬಳೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಹೋದ ಫಾತಿಮತ್ ಜುಹರಾ ಮರಳಿ ಹಿಂತಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರ ಪತಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page