ಫ್ಲೈವುಡ್ ಹೇರಿದ ಲಾರಿಗೆ ಹಗ್ಗ ಬಿಗಿಯುತ್ತಿದ್ದಾಗ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು

ಕುಂಬಳೆ: ಫೆವುಡ್ ಹೇರಿದ ಲಾರಿಯ  ಮೇಲೆ ಹತ್ತಿ ಹಗ್ಗ ಬಿಗಿಯುತ್ತಿದ್ದಾಗ ಕೆಳಕ್ಕೆ ಬಿದ್ದು ಕಾರ್ಮಿಕ ಮೃತಪಟ್ಟ ದಾರುಣ ಘಟನೆ  ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನಡೆದಿದೆ.  ಅಸ್ಸಾಂನ ನಾಗೋನ್ ರೂಪಾಣಿಸಲ್ ಸಲ್ಫಾರ ನಿವಾಸಿ  ಹಬೀಬುಲ್ ರಹ್ಮಾನ್ (51) ಸಾವನ್ನಪ್ಪಿದ ದುರ್ದೈವಿ.  ಇವರು ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನ ಫ್ಲೈವುಡ್ ಕಾರ್ಖಾನೆಯ ಕಾರ್ಮಿಕನಾಗಿದ್ದರು.  ನಿನ್ನೆ ಸಂಜೆ ಇವರು ಫ್ಲೈವುಡ್ ಹೇರಿದ ಲಾರಿ ಮೇಲೆ ಹತ್ತಿ ಹಗ್ಗ ಬಿಗಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ  ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

RELATED NEWS

You cannot copy contents of this page