ವೈದ್ಯನೆಂದು ತಿಳಿಸಿ ನೂರರಷ್ಟು ಮಹಿಳೆಯರಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿದ ಯುವಕ ಸೆರೆ: ಆರೋಪಿ ವಿರುದ್ಧ ಮಂಜೇಶ್ವರದಲ್ಲಿ  ಅತ್ಯಾಚಾರ ಪ್ರಕರಣ

ಕಾಸರಗೋಡು: ವೈದ್ಯ, ಇಂಜಿನಿ ಯರ್ ಎಂದು ತಿಳಿಸಿ ನೂರರಷ್ಟು ಮಹಿಳೆಯರಿಗೆ ಮದುವೆಯ ಭರವಸೆಯೊಡ್ಡಿ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದ ಯುವಕ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಅತ್ಯಾಚಾರ ಪ್ರಕರಣದ ಆರೋಪಿ ಯಾದ ವಯನಾಡ್‌ನ ಮಾನಂತವಾಡಿ ವೆಳ್ಳರ ಚೆನ್ನಿಕ್ಕರ ವೀಟಿಲ್ ಬಿಜು ಆಂಟನಿ (45) ಎಂಬಾತನನ್ನು ಚೇರ್ತಲ ಪೊಲೀಸರು ಬಂಧಿಸಿದ್ದಾರೆ. ಸುಲ್ತಾನ್ ಬತ್ತೇರಿ ನಿವಾಸಿಯಾದ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.

ತಾನು ವೈದ್ಯನೆಂದು ತಿಳಿಸಿ ತಳಿಪರಂಬ ನಿವಾಸಿಯಾದ ಯುವತಿ ಯನ್ನು ಹೊಸಂಗಡಿಯ ಲಾಡ್ಜ್‌ಗೆ ಕರೆತಂದು ಅಲ್ಲಿ ಆಕೆಗೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಬಿಜು ಆಂಟನಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ಅಲ್ಲದೆ ಯುವತಿಯ ಮೂರೂವರೆ ಪವನ್ ಚಿನ್ನಾಭರಣವನ್ನು ಆರೋಪಿ ಲಪಟಾಯಿಸಿರುವುದಾಗಿ ದೂರಲಾಗಿದೆ.

೨೦೨೦ರಲ್ಲಿ ಈತ ವಂಚನೆ ಆರಂಭಿಸಿದ್ದನು. ಚೇರ್ತಲ ವಯಲಾರ್‌ನಲ್ಲಿ ರಮ್ಯ ಎಂಬ ಯುವತಿಯನ್ನು ಮದುವೆಯಾಗಿ ಮೊದಲ ವಂಚನೆ ನಡೆಸಿದ್ದಾನೆ. ರಾಜೇಶ್ ಎಂಬ ಹೆಸರಿನಲ್ಲಿ ಅಂದು  ಯುವತಿಯನ್ನು ಪರಿಚಯಗೊಂಡು ಆಕೆಯನ್ನು ಮದುವೆಯಾಗಿದ್ದನು. ಮದುವೆಯ ಬಳಿಕ ಮೂರನೇ ದಿನ 30,000 ರೂಪಾಯಿ ಹಾಗೂ 7 ಪವನ್ ಚಿನ್ನಾಭರಣವನ್ನು ಲಪಟಾಯಿಸಿ ಈತ ಪರಾರಿಯಾಗಿದ್ದನು. ಈ ಬಗ್ಗೆ ರಮ್ಯ ನೀಡಿದ ದೂರಿನಂತೆ ಚೇರ್ತಲ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದರೂ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಆರು ವರ್ಷಗಳ ಬಳಿಕ ಬಿಜು ಆಂಟನಿ ಸೆರೆಗೀಡಾಗಿದ್ದಾನೆ. ತಾನು ವೈದ್ಯ, ಇಂಜಿನಿಯರ್ ಎಂದು ತಿಳಿಸಿ ಮದುವೆ ಜಾಹೀರಾತು ನೀಡಿ ಯುವತಿಯರನ್ನು ಪರಿಚಯಗೊಂಡ ಬಳಿಕ ಅವರನ್ನು ಬಲೆಗೆ ಬೀಳಿಸಿ ಚಿನ್ನಾಭರಣಗಳ ಸಹಿತ ತಲೆಮರೆಸಿಕೊಳ್ಳುವುದು ಈತನ ರೀತಿಯಾಗಿದೆ. ಹಲವು ಸ್ಥಳಗಳಲ್ಲಿ ನಾನಾ ಹೆಸರುಗಳಲ್ಲಾಗಿ ಈತ ಯುವತಿಯರನ್ನು ಪರಿಚಯಗೊಂಡು ಬಲೆಗೆ ಬೀಳಿಸಿ ವಂಚಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page