ಇಚ್ಲಂಗೋಡಿನಲ್ಲಿ ಮುರಿದುಬಿದ್ದ ಕಂಗಿನ ಮರಗಳು: ಕೃಷಿಕರಿಗೆ ಸಂಕಷ್ಟ

ಬಂದ್ಯೋಡು: ಗಾಳಿ ಮಳೆಗೆ ಕಂಗಿನ ಮರಗಳು ಮುರಿದು ಬಿದ್ದು ಅಪಾರ ನಾಶನಷ್ಟ ಉಂಟಾಗಿದೆ. ಮಂಗಲ್ಪಾಡಿ ಪಂಚಾಯತ್‌ನ 12ನೇ ವಾರ್ಡ್ ಇಚ್ಲಂಗೋಡು ಬಳಿಯ ಮಲೆಂದೂರು ನಿವಾಸಿ ಕೃಷಿಕ ಭಾಸ್ಕರ ರಾವ್ ಒಬರ್ಲೆ ಎಂಬವರ 3 ಎಕ್ರೆ ಸ್ಥಳದಲ್ಲಿರುವ ತೋಟದಲ್ಲಿ  200ಕ್ಕೂ ಅಧಿಕ ಫಲ ಕೊಡುವ ಅಡಿಕೆ ಮರಗಳು, ತೆಂಗು, ಬಾಳೆ ಗಿಡಗಳು ಮುರಿದು ಬಿದ್ದು ನಾಶನಷ್ಟವುಂ ಟಾಗಿದೆ. ಈಬಗ್ಗೆ  ಮಂಗಲ್ಪಾಡಿ ಕೃಷಿ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಇಚ್ಲಂಗೋಡು ಕೋಮಾರ್ ಹೌಸ್‌ನ ಪ್ರದೀಪ್ ಶೆಟ್ಟಿ, ಮಲೆಂದೂರು ಬಾವು, ಕೆದ್ವಾರ್ ಕೋಚಪ್ಪ ಶೆಟ್ಟಿ, ಇಚ್ಲಂಗೋಡು ಸಂಕಯ್ಯ ಶೆಟ್ಟಿ ಎಂಬವರ ತೋಟದಲ್ಲೂ ಹಲವು ಅಡಿಕೆ ಮರಗಳು ಮುರಿದು ಬಿದ್ದಿವೆ.

RELATED NEWS

You cannot copy contents of this page