ಉಪ್ಪಳ ನಿವಾಸಿ ಸೌದಿಯಲ್ಲಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಉಪ್ಪಳ ಬಳಿಯ ನಿವಾಸಿ ಯೊಬ್ಬರು ಸೌದಿಯಲ್ಲಿ ಕುಸಿದುಬಿದ್ದು ಮೃತಪಟ್ಟರು. ಉಪ್ಪಳ ಗೇಟ್ ಪೊಯ್ಯೆ ಹೌಸ್‌ನ ದಿ| ಮುಹಮ್ಮದ್ ಎಂಬವರ ಪುತ್ರ ಹನೀಫ್ ಅಬ್ಬಾಸ್ (೫೫) ಮೃತಪಟ್ಟ ವ್ಯಕ್ತಿ. ಸುಮಾರು ೩೫ ವರ್ಷಗಳಿಂದ  ಸೌದಿ  ಅರೇಬಿ ಯಾದಲ್ಲಿರುವ ಇವರು ಪ್ರಸ್ತುತ ಅಲ್ಲಿನ ಖಸೀಂ ಏರ್‌ಪೋರ್ಟ್‌ನಲ್ಲಿ ಫೋ ರ್ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಕೆಲಸ ಮುಗಿಸಿ ವಾಸಸ್ಥಳಕ್ಕೆ ತೆರಳುತ್ತಿದ್ದಾಗ ವಾಹನದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸ ಲಾಗಲಿಲ್ಲವೆನ್ನಲಾಗಿದೆ.

RELATED NEWS

You cannot copy contents of this page