ಉಪ್ಪಳ ಬಳಿ ಮನೆಯಿಂದ ನಗ-ನಗದು ಕಳವು

ಉಪ್ಪಳ: ಕುಟುಂಬ ಉಮ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ನಗ-ನಗದು ದೋಚಿದ್ದಾರೆ. ಉಪ್ಪಳ ಮಜಲ್ ಎಂಬಲ್ಲಿನ ಮೊಹಮ್ಮದ್ ರಫೀಕ್ ಎಂಬವರ ಮನೆಯಿಂದ ಕಳವು ನಡೆದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಏಳು ಪವನ್ ಚಿನ್ನಾಭರಣ ಹಾಗೂ 60 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಮೊನ್ನೆ ರಾತ್ರಿ ಈ ಕಳವು ನಡೆದಿದೆ. ಮಜಲ್ ಸಮೀಪದಲ್ಲಿ ವಾಸಿಸುವ ಮೊಹಮ್ಮದ್ ರಫೀಕ್ ಪುತ್ರಿ ರಿಹಾನ ಬಾನು ನಿನ್ನೆ ಬೆಳಿಗ್ಗೆ ಈ ಮನೆಗೆ ತೆರಳಿದ್ದ ವೇಳೆ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಈ ಬಗ್ಗೆ ರಿಹಾನಬಾನು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಸ್‌ಐ ಲಿನೇಶ್ ನೇತೃತ್ವದ ಪೊಲೀಸರು ನಿನ್ನೆ ಮನೆಗೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ ಇಂದು ಬೆರಳಚ್ಚು ತಜ್ಞರು ತಲುಪಿ ಹೆಚ್ಚಿನ ಪರಿಶೀಲನೆ ನಡೆಸಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page