ಎಂ.ವಿ. ಬಾಲಕೃಷ್ಣನ್ ಪರ್ಯಟನೆ

ಕಾಸರಗೋಡು: ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಕಾಸರಗೋಡು ಮಂಡಲದಲ್ಲಿ ಪರ್ಯಟನೆ ನಡೆಸಿದರು. ಮುಳ್ಳೇರಿಯ ಬಳಿಯ ಗಾಡಿಗುಡ್ಡೆಯಿಂದ ಆರಂಭಗೊಂಡ ಪರ್ಯಟನೆ ವಿವಿಧ ಕಡೆಗಳಲ್ಲಿ ಸಂಚರಿಸಿ ಇಬ್ರಾಂವಳಪ್‌ನಲ್ಲಿ ಸಮಾಪ್ತಿಗೊಂಡಿತು. ಈ ಮಧ್ಯೆ ಏಣಿಯರ್ಪು, ಪಳ್ಳಪ್ಪಾಡಿ, ಏತಡ್ಕ, ಮರಿಕ್ಕಾನ, ನಾರಂಪಾಡಿ, ನೆಲ್ಯಡ್ಕ, ಆದೂರು, ಕರ್ಮಂತೋಡಿ, ಚಟ್ಟಂಗುಳಿ, ಸೂರ್ಲು, ಮಜಲ್, ತಾಯಲಂಗಾಡಿ, ಚೇರೂರು ಮೊದಲಾದಕಡೆಗಳಲ್ಲೆಲ್ಲಾ ಅವರು ಪರ್ಯಟನೆ ನಡೆಸಿದರು.

ಇಂದು ಪಯ್ಯನ್ನೂರು ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಯಲಿದೆ. ರಾಮಂತಳಿ ವಡುಕುಂಬಾಟ್‌ನಿಂದ ಆರಂಭಗೊಳ್ಳುವ ಪರ್ಯಟನೆ ರಾತ್ರಿ ಕರಿವೆಳ್ಳೂರಿನಲ್ಲಿ ಸಮಾಪ್ತಿಗೊಳ್ಳಲಿದೆ.

RELATED NEWS

You cannot copy contents of this page