ಎನ್‌ಡಿಎ ಉಮೇದ್ವಾರೆಗೆ ಚುನಾವಣಾ ಠೇವಣಿ ಮೊತ್ತ ಹಸ್ತಾಂತರಿಸಿದ ಬಿಡಿಜೆಎಸ್

ಕಾಸರಗೋಡು: ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯ ವರಿಗೆ ನಾಮಪತ್ರ ಸಲ್ಲಿಸುವ ವೇಳೆ ಪಾವತಿಸಬೇಕಾದ ಠೇವಣಿಯ ಒಂದು ಪಾಲನ್ನು ಬಿಡಿಜೆಎಸ್ ಹಸ್ತಾಂತರಿಸಿದೆ.

ಬಿಡಿಜೆಎಸ್ ಕಾಸರಗೋಡು ಕ್ಷೇತ್ರ ಸಮಾವೇಶದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮನೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಧ್ಯಕ್ಷರಾದ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಎನ್‌ಡಿಎ ಸಂಚಾಲಕ ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರಕಟ್ಟೆ ಮೊದಲಾದವರ ಸಾನ್ನಿಧ್ಯದಲ್ಲಿ ಈ ಠೇವಣಿ ಮೊತ್ತವನ್ನು ಎಂ.ಎಲ್. ಅಶ್ವಿನಿಯವರಿಗೆ ಹಸ್ತಾಂತರಿಸಲಾಯಿತು. ಇನ್ನೊಂದೆಡೆ ಎನ್‌ಡಿಎ ಉಮೇದ್ವಾ ರೆಯ ಪರ ಪ್ರಚಾರ ಕಾರ್ಯಕ್ಕೂ ಬಿಡಿಜೆಎಸ್ ಚಾಲನೆ ನೀಡಿದೆ. ಬಿಡಿಜೆಎಸ್ ರಾಜ್ಯ ಕಾರ್ಯದರ್ಶಿ ಇ. ಮನೀಶ್ ಕಾರ್ಯಕ್ರಮ ಉದ್ಘಾಟಿಸಿ ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕೆ. ಪ್ರಭಾಕರನ್, ಪಿ.ಕೆ. ವಿಜಯನ್ ಪಿ. ಜೋಷಿ, ಉಮೇದ್ವಾರೆ ಎಂ.ಎಲ್. ಅಶ್ವಿನಿ, ಮೋಹಿನಿ ಹರೀಶ್, ಕೆ.ಕೆ. ನಾರಾಯಣನ್, ಕೆ. ಕುಂಞಿಕೃಷ್ಣನ್ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page