ಕಣ್ಣೂರಿನಲ್ಲಿ ರಸ್ತೆ ಅಡ್ಡಗಟ್ಟಿ ಚಳವಳಿ: ಸಿಪಿಎಂ ನೇತಾರರ ವಿರುದ್ಧ ಕೇಸು
ಕಣ್ಣೂರು: ಕೇಂದ್ರ ಕೇರಳವನ್ನು ಅವಗಣಿಸುತ್ತಿದೆ ಎಂದು ಆರೋಪಿಸಿ ರಸ್ತೆಯಲ್ಲಿ ಚಪ್ಪರ ನಿರ್ಮಿಸಿ ಹಾಗೂ ಕುರ್ಚಿಗಳನ್ನಿರಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವುದರ ವಿರುದ್ಧ ಹೈಕೋರ್ಟ್ ಹೊರಡಿಸಿದ ನಿರ್ದೇಶ ಉಲ್ಲಂಘಿಸಿದ ಆರೋಪದಂತೆ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜನ್, ಶಾಸಕ ಕೆ.ವಿ. ಸುಮೇಶ್ ಸಹಿತ ೫೦೦೦ದಷ್ಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಿಪಿಎಂ ನೇತೃತ್ವದಲ್ಲಿ ನಿನ್ನೆ ನಡೆದ ಅಂಚೆ ಕಚೇರಿ ಮಾರ್ಚ್ ವಿರುದ್ಧ ಕೇಸು ದಾಖಲಿಸಲಾಗಿದೆ.