ಕರ್ನಾಟಕ ಮದ್ಯ ವಶ
ಕಾಸರಗೋಡು: ತೆಕ್ಕಿಲ್ ಬಳಿಯ ಪೊಯಿನಾಚಿಯಲ್ಲಿ ಕಾಸ ರಗೋಡು ರೇಂಜ್ ಅಬಕಾರಿ ಅಧಿ ಕಾರಿಗಳು ನಡೆಸಿದ ಕಾರ್ಯಾಚರಣೆ ಯಲ್ಲಿ 180 ಎಂಎಲ್‌ನ 16 ಪ್ಯಾಕೆಟ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ಹೊಸದುರ್ಗ ನೆಲ್ಲಿಯಡ್ಕ ನಿವಾಸಿ ಜಗದೀಶ್ ಜೆ (40) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿ ನಮ್ಮನ್ನು ದೂಡಿ ಹಾಕಿ ಆತ ಬಂದ ಬೈಕ್‌ನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾಗಿ ದ್ದಾರೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆತನ ಬೈಕ್ ಹಾಗೂ ಮೊಬೈಲ್ ಫೋನ್ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿ ದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ಜೋ ಸೆಫ್ ಜೆ, ಸಿಒಗಳಾದ ಶಂಸುದ್ದೀನ್, ಎ.ವಿ. ರಂಜಿತ್, ಸಿಇಒಗಳಾದ ರಾಜೇಶ್ ಪಿ., ಕಣ್ಣನ್‌ಕುಂಞಿ ಮೊದಲಾದವರು ಕಾರ್ಯಾಚರಣೆಯಲ್ಲಿ ಒಳಗೊಂಡಿದ್ದರು.