ಕಲ್ಯೋಟ್‌ನಲ್ಲಿ ವೃದ್ಧನ ಮೃತದೇಹ ಬಾವಿಯಲ್ಲಿ ಪತ್ತೆ

ಪೆರಿಯ:  ಕಲ್ಯೋಟ್‌ನಲ್ಲಿ ವೃದ್ಧ  ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಕಲ್ಯೋಟ್ ಭಗವತೀ ಕ್ಷೇತ್ರ ಸಮೀಪದ ಕುಂಞಾಚ್ಚಂ ವೀಟಿಲ್ ವಿ. ನಾರಾಯಣ (60)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದು, ಇವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನಿನ್ನೆ ಸಂಜೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ಮಧ್ಯೆ ಮೃತದೇಹ ಬಾವಿಯಲ್ಲಿ ಪತ್ತೆಹಚ್ಚಲಾಗಿದೆ. ಹಗ್ಗ ಬಾವಿಗೆ ಜೋತಾಡಿಕೊಂಡಿತ್ತು. ಇದನ್ನು ನೋಡಿ ಬಾವಿ ಪರಿಶೀಲಿಸಿ ದಾಗ ಮೃತದೇಹ ಕಂಡುಬಂದಿದೆ. ನೀರು ಸೇದುತ್ತಿರುವ ಮಧ್ಯೆ ಬಾವಿಗೆ  ಬಿದ್ದಿರ ಬೇಕೆಂದು ಶಂಕಿಸಲಾಗಿದೆ. ಮೃತದೇ ಹವನ್ನು ಮೇಲೆತ್ತಿ ಮಹಜರಿಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಓಮನ, ಮಕ್ಕಳಾದ ರಸ್ನ, ಸೂರಜ್, ಸಹೋದರಿಯರಾದ ಸರೋಜಿನಿ, ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page