ಕಾನತ್ತಿಲ ಶ್ರೀ ಧೂಮಾವತೀ ದೈವಸ್ಥಾನ ನವೀಕರಣ ಪ್ರತಿಷ್ಠಾಕಾರ್ಯ

ಬದಿಯಡ್ಕ: ಕಾನತ್ತಿಲ ಶ್ರೀ ಧೂಮಾವತೀ ದೈವಸ್ಥಾನ ನವೀಕರಣ ಪ್ರತಿಷ್ಠಾ ಮಹೋತ್ಸವ ನಿನ್ನೆ ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಇವರ ಲ್ಲರೋಹಿತ್ಯದಲ್ಲಿ ಪ್ರತಿಷ್ಠಾ ಕಾರ್ಯ, ಕಲಶಾಭಿಷೇಕ ಜರಗಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಬುಧವಾರ ಸಂಜೆ ಪುಣ್ಯಾಹವಾಚನ, ದೇವತಾ ಪ್ರಾರ್ಥನೆ, ರಾಕ್ಷೆÆÃಘ್ನ ಹವನ, ವಾಸ್ತುಹವನ, ವಾಸ್ತುಬಲಿ, ವಾಸ್ತು ಪುಣ್ಯಾಹ ಜರಗಿತು. ಗುರುವಾರ ಬೆಳಗ್ಗೆ ಮಹಾಗಣಪತಿ ಹವನ, ಕಲಶಪೂಜೆ, ಪ್ರಾಸಾದ ಪ್ರತಿಷ್ಠೆ, ಮುಹೂರ್ತ ದಾನ, ಶ್ರೀ ಧೂಮಾವತಿ ದೈವದ ದಾರು ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ನಿತ್ಯನೈಮಿತ್ತಿಕಾದಿಗಳ ನಿರ್ಣ ಯ, ಮಂತ್ರಾಕ್ಷತೆ ಜರಗಿತು. ಬಳಿಕ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಶ್ರೀ ದುರ್ಗಾಪೂಜೆ, ಮಂಗಳಾ ರತಿ, ಅನ್ನಸಂತರ್ಪಣೆ ಜರಗಿತು. ಇಂದು ಬೆಳಗ್ಗೆ ಶ್ರೀಧೂಮಾವತೀ ದೈವದ ನೃತ್ಯ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಿತು.

RELATED NEWS

You cannot copy contents of this page