ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಸಂಬಂಧ ವಾಗ್ವಾದಆಕ್ರಮಣ: ಇಬ್ಬರು ಆಸ್ಪತ್ರೆಗೆ ದಾಖಲು

ಕುಂಬಳೆ:  ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ಇಬ್ಬರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ನಿನ್ನೆ ರಾತ್ರಿ ಉಳುವಾರು ಜುಮಾ ಮಸೀದಿ ಬಳಿ ಆಕ್ರಮಣ ಉಂಟಾಗಿದೆ. ಬಂಬ್ರಾಣ ನಿವಾಸಿಗಳಾದ ಮುವೈಸ್ (20), ಸಹೋದರ ಮುಹಮ್ಮದ್ ರಿಯಾನ್(10) ಆಕ್ರಮಣದಿಂದ ಗಾಯಗೊಂಡಿದ್ದಾರೆ. ಇವರು ಘಟನೆ ಬಗ್ಗೆ ಈ ರೀತಿ ತಿಳಿಸಿದ್ದಾರೆ.

ಮುವೈಸ್‌ನ ಚಿಕ್ಕಮ್ಮನ ಪುತ್ರ ಉಳುವಾರು ದರ್ಸ್‌ನಲ್ಲಿ ಕಲಿಯುತ್ತಿದ್ದು, ಈತನನ್ನು ನೋಡಲು ಸ್ಕೂಟರ್‌ನಲ್ಲಿ ಮುವೈಸ್ ಹಾಗೂ ಮುಹಮ್ಮದ್ ರಿಯಾನ್ ತೆರಳಿದ್ದರು. ಈ ವೇಳೆ ಸ್ಕೂಟರ್ ನಿಲ್ಲಿಸಿ ಮಸೀದಿಗೆ ತೆರಳಿದ್ದರು. ಇದೇ ವೇಳೆ ಕಾರೊಂದು ರಿವರ್ಸ್ ತೆಗೆಯುತ್ತಿದ್ದಾಗ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸ್ಕೂಟರ್ ಮಗುಚಿ ಬಿದ್ದಿದೆ. ಇದನ್ನು ಮುವೈಸ್ ಕಾರಿನ ಚಾಲಕನಲ್ಲಿ ಪ್ರಶ್ನಿಸಿದಾಗ ಆತ ಕಾರು ಸಹಿತ ಪರಾರಿಯಾಗಿದ್ದಾನೆ. ಬಳಿಕ ಮುವೈಸ್ ಮತ್ತು ಸಹೋದರ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ದಾರಿ ಮಧ್ಯೆ ಕಾರು ಚಾಲಕ ಇವರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಮುವೈಸ್‌ನ ಮುಖಕ್ಕೆ ಹೊಡೆದಿದ್ದು, ಈ ವೇಳೆ ತಡೆಯಲು ಬಂದ ಮುಹಮ್ಮದ್ ರಿಯಾನ್‌ನನ್ನು ದೂಡಿ ಹಾಕಲಾಗಿದೆ. ಕಾರಿನ ನಂಬ್ರವನ್ನು ಇವರು ಗುರುತಿಸಿಕೊಂಡಿದ್ದು, ಕಾರು ಚಾಲಕನ ಬಗ್ಗೆ ಪೊಲೀಸರಲ್ಲಿ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಮುವೈಸ್ ಹಾಗೂ ರಿಯಾನ್ ಈಗ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

RELATED NEWS

You cannot copy contents of this page