ಕಾಸರಗೋಡಿನ ಶಾನು ಕೊಲೆ ಪ್ರಕರಣದ ಆರೋಪಿ ನೇಣು ಬಿಗಿದು ಸಾವು
ಕುಂಬಳೆ: ಕಾಸರಗೋಡು ನಗರ ಪೊಲೀಸ್ ಠಾಣೆ ಸಮೀಪ ಯುವಕನನ್ನು ಇರಿದು ಕೊಲೆಗೈದು ಮೃತದೇಹವನ್ನು ಪಾಳುಬಾವಿಗೆಸೆದ ಪ್ರಕರಣದ ಆರೋಪಿಯಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕೊಡ್ಯಮ್ಮೆ ವಿಲ್‌ರೋಡಿ ನಿವಾಸಿ ಮೊಯ್ದೀನ್- ಖದೀಜ ದಂಪತಿಯ ಪುತ್ರ ಮುನವರ್ ಖಾಸಿಂ (28) ಸಾವಿಗೀಡಾದ ವ್ಯಕ್ತಿ. ಇಂದು ಮುಂ ಜಾನೆ ಮನೆಯ ಸೆಂಟ್ರಲ್ ಹಾಲ್‌ನ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮುನವರ್ ಖಾಸಿಂ ಕಂಡು ಬಂದಿ ದ್ದನು. ಕೂಡಲೇ ಆತನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಕುಂಬಳೆ ಪೊಲೀಸರು ಮೃತದೇಹದ ಮಹಜರು ನಡೆಸಿದರು.
2019ರಲ್ಲಿ ಪಟ್ಲದ ಶಾನು ಯಾನೆ ಶಾನವಾಸ್ ಎಂಬವರನ್ನು ಕೊಲೆಗೈದು ಮೃತದೇಹವನ್ನು ಕಾಸರ ಗೋಡಿನಲ್ಲಿ ಪಾಳು ಬಾವಿಯೊಂದಕ್ಕೆ ಎಸೆದ ಪ್ರಕರಣದಲ್ಲಿ ಮುನವರ್ ಖಾಸಿಂ ಆರೋಪಿಯಾಗಿದ್ದಾನೆನ್ನಲಾಗಿದೆ. ಇದೇ ವೇಳೆ ಮುನವರ್ ಖಾಸಿಂನನ್ನು ಶಾನು ಕೊಲೆ ಪ್ರಕರಣದಲ್ಲಿ ಪೊಲೀಸರು ಮನಃಪೂರ್ವಕ ಆರೋಪಿಯಾಗಿ ಸಿರುವುದಾಗಿ ತಂದೆ ಮೊಯ್ದೀನ್ ಆರೋಪಿಸಿದ್ದಾರೆ. ಆಟೋ ಚಾಲಕನಾ ಗಿದ್ದ ಮುನವರ್ ಖಾಸಿಂ ಆಟೋ ರಿಕ್ಷಾವನ್ನು ಬಾಡಿಗೆಗೆ ಕೊಂಡೊಯ್ದಿ ದ್ದನ. ಆತನಿಗೆ ಕೊಲೆ ಪ್ರಕರಣದ ಕುರಿತು ತಿಳಿದಿರಲಿಲ್ಲವೆಂದು ಮೊಯ್ದೀನ್ ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗುವುದ ರೊಂದಿಗೆ ಪುತ್ರ ಮಾನಸಿಕವಾಗಿ ನೊಂದಿದ್ದನೆಂದೂ ಅವರು ತಿಳಿಸಿದ್ದಾರೆ. ಮೃತ ಮುನವರ್ ಖಾಸಿಂ ಸಹೋದರ-ಸಹೋ ದರಿಯರಾದ ಮುಕ್ತಾರ್, ಮುಮ್ತಾಸ್, ಮುನ್ಶೀರ್, ಮುನೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಶಾನು ಕೊಲೆ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಓರ್ವನಾದ ಕುಂಬಳೆ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (38) ಕಳೆದ ವರ್ಷ ಅಕ್ಟೋಬರ್ 1ರಂದು ರಾತ್ರಿ ಕೊಲೆಗೀಡಾಗಿದ್ದನು. ಕುಂಬಳೆ ಐಎಚ್‌ಆರ್‌ಡಿ ಕಾಲೇಜು ಸಮೀಪದ ಪೊದೆಗಳೆಡೆಯಲ್ಲಿ ರಶೀದ್‌ನ ಮೃತದೇಹ ಪತ್ತೆಯಾಗಿತ್ತು.