ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಸಮಿತಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆ

ಕಾಸರಗೋಡು: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಪ್ಯಾನಲ್‌ನಲ್ಲಿ ಸ್ಪರ್ಧಿಸಿದ 13 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.

ಚೆಯರ್‌ಮೆನ್ ಆಗಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ವೈಸ್ ಚೆಯರ್‌ಮೆನ್‌ಆಗಿ ಮಹಾಬಲ ರೈ ಎಂಬಿವರು ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ನ್ಯಾಯವಾದಿ ಅನಂತರಾಮ ಪಿ, ಪ್ರಕಾಶ್ ಬಿ.ಕೆ, ದಿನೇಶ್ ಎಂ.ಟಿ, ಗುರುಪ್ರಸಾದ್ ಪ್ರಭು.ಕೆ, ದಾಮೋದರ ಭಟ್ ಕೆ, ಐತ್ತಪ್ಪ ಕೆ, ರಮೇಶ್ ಕಳೇರಿ, ಮಣಿಕಂಠನ್ ಕೆ.ವಿ, ಶೋಭಾರಾಣಿ, ಜಾಹ್ನವಿ ಕೆ, ರೂಪಾ ಕಾಮತ್ ಎಂಬಿವರು ಆಯ್ಕೆಗೊಂಡಿದ್ದಾರೆ. ಕೋ-ಆಪರೇಟಿವ್ ಇನ್‌ಸ್ಪೆಕ್ಟರ್ ಅನೀಶ್ ಚುನಾವಣಾಧಿಕಾರಿಯಾಗಿದ್ದರು.

RELATED NEWS

You cannot copy contents of this page