ಕುಂಜತ್ತೂರು ಶಾಲೆಯಲ್ಲಿ ಪ್ರವೇಶೋತ್ಸವ

ಮಂಜೇಶ್ವರ: ಜಿ.ವಿ.ಎಚ್.ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಬಲೂನುಗಳನ್ನು ನೀಡಿ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಖಾದರ್ ಹನೀಫ್ ಎಸ್ ಕೆ. ಉದ್ಘಾಟಿಸಿದರು. ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು.
ಮಂಜೇಶ್ವರ ಪೊಲೀಸ್ ಠಾಣೆಯ ಎಸ್.ಐ ಲಿನೇಶ್, ಎಸ್.ಎಂ.ಸಿ ಸದಸ್ಯರಾದ ಈಶ್ವರ ಎಂ, ವಿ.ಎಚ್.ಎಸ್.ಸಿ. ಪ್ರಾಚಾರ್ಯರಾದ ಶಿಶುಪಾಲನ್, ಹಿರಿಯ ಶಿಕ್ಷಕಿ ರಾಣಿ ವಾಸುದೇವನ್, ಅನಿತಾ ಪಿ ಜಿ, ನಿವೃತ್ತ ಶಿಕ್ಷಕಿ ಅಮಿತಾ, ರವೀಂದ್ರ ರೈ ಕೆ. ಶುಭಹಾರೈಸಿದರು. ಈ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ ಮತ್ತು ವಿ. ಎಚ್. ಎಸ್. ಸಿ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೈ ಐ ಪಿ ಯಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಗಳಾದ ಅವ್ವಮ್ಮರಫೀನ, ಶಿಝ ಮತ್ತು ಫಾತಿಮತ್ ಇಝ ಇವರನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ ಸ್ವಾಗತಿಸಿ, ಶಿಕ್ಷಕ ದಿವಾಕರ ಬಲ್ಲಾಳ ಎ ಬಿ. ವಂದಿಸಿದರು. ಕವಿತಾ ಕೆ. ಅಶ್ರಫ್ ಸಿ. ನಿರೂಪಿಸಿದರು.

RELATED NEWS

You cannot copy contents of this page