ಕೇರಳ ರಾಜ್ಯ ಟೈಲರ್ಸ್ ಅಸೋಸಿಯೇಶನ್‌ನಿಂದ ಹೊಲಿಗೆ ಯಂತ್ರ ವಿತರಣೆ, ಶಾಸಕರಿಗೆ ಗೌರವಾರ್ಪಣೆ

ಕುಂಬಳೆ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮಿತಿ ಆಶ್ರಯದಲ್ಲಿ ಹೊಲಿಗೆ ಯಂತ್ರ ವಿತರಣೆ ಹಾಗೂ ಶಾಸ ಕರಿಗೆ ಗೌರವಾರ್ಪಣೆ  ಕಾರ್ಯಕ್ರಮ ಗುರುವಾರ ಕುಂಬಳೆಯಲ್ಲಿ ನಡೆಯಲಿದೆಯೆಂದು ಪದಾಧಿಕಾರಿಗಳು  ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ ೧೦.೩೦ಕ್ಕೆ ಕುಂಬಳೆ ವ್ಯಾಪಾರಿ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಬಡವರಾದ ೫ ಮಂದಿ ಹೊಲಿಗೆ ಕಾರ್ಮಿಕರಿಗೆ ಹೊಲಿಗೆ ಯಂತ್ರವನ್ನು ಶಾಸಕರು ವಿತರಿಸುವರು. ತಾಲೂಕು ಸಮಿತಿ ಅಧ್ಯಕ್ಷ ರಾಮನ್ ಪೊಯ್ಯೆಕಂಡ ಅಧ್ಯಕ್ಷತೆ ವಹಿಸುವರು. ಕಾರ್ಮಿಕರಿಗೆ ೫ ತಿಂಗಳಿನಿಂದ ಪಿಂಚಣಿ ವಿತರಣೆ ಮೊಟಕುಗೊಂಡಿದೆಯೆಂದೂ ಅದನ್ನು ಕೂಡಲೇ ವಿತರಿಸಬೇಕೆಂದು ಪದಾಧಿಕಾರಿಗಳು ಆಗ್ರಹಪಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಟಿಎ ಮಾಜಿ ರಾಜ್ಯ ಅಧ್ಯಕ್ಷ ರಾಮನ್ ಚೆನ್ನಿಕ್ಕರೆ, ಜಿಲ್ಲಾಧ್ಯಕ್ಷ ಸುರೇಶ್, ರಾಜ್ಯ ಕಾರ್ಯದರ್ಶಿ ಮೋಹನ್, ರಾಜ್ಯ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ, ತಾಲೂಕು ಅಧ್ಯಕ್ಷ ರಾಮನ್ ಪೊಯ್ಯೆಕಂಡ,  ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರಿ ಭಾಗವಹಿಸಿದರು.

RELATED NEWS

You cannot copy contents of this page