ಕೊಬ್ಬರಿ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ
ಮುಳಿಯಾರು: ಕೊಬ್ಬರಿ ಕಾರ್ಖಾನೆಗೆ ಆಕಸ್ಮಾತ್ ಆಗಿ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಷ್ಟ ಉಂಟಾದ ಘಟನೆ ನಡೆದಿದೆ.
ಅರ್ಲಡ್ಕ ಕೋಪಾಳಕೊಚ್ಚಿಯ ಯೂಸುಫ್ ಕಳರಿ ಎಂಬವರ ಮಾಲಕತ್ವದಲ್ಲಿರುವ ಕೊಬ್ಬರಿ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ಈ ಬೆಂಕಿ ಅನಾಹುತ ಉಂಟಾಗಿದೆ.
ಇದರೊಳಗಿದ್ದ ಕಿಲೋ ಗಟ್ಟಲೆಯಷ್ಟು ಕೊಬ್ಬರಿ, ತೆಂಗಿನಕಾಯಿ, ಒಣಗಿಸಲು ಬಳಸುವ ಡ್ರೈಯರ್ ಮತ್ತಿತರ ಯಂತ್ರಗಳು ಸೇರಿದಂತೆ ಇಡೀ ಕಾರ್ಖಾನೆಯೇ ಬಹುತೇಕ ಬೆಂಕಿಗಾಹುತಿಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳದವರು ತಕ್ಷಣ ಎರಡು ಇಂಜಿನ್‌ಗಳಲ್ಲಾಗಿ ಘಟನೆ ಸ್ಥಳಕ್ಕೆ ಆಗಮಿಸಿ ಗಂಟೆಗಳ ಕಾಲ ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಸಫಲರಾದರು. ಊರ ವರೂ ಅವರೊಂದಿಗೆ ಸಹಕರಿಸಿದರು.