ತಪಾಸಣಾ ಕೇಂದ್ರದಲ್ಲಿ ವಿಜಿಲೆನ್ಸ್ ಹಣ ಪತ್ತೆ ಹಚ್ಚಿದ ಪ್ರಕರಣ: ಐವರು ಆರೋಪಿಗಳ ಖುಲಾಸೆ

ಕಾಸರಗೋಡು: ಕಾಸರಗೋಡು ಚೆರುವತ್ತೂರು ಆರ್‌ಟಿಒ ತಪಾಸಣಾ ಕೇಂದ್ರದಲ್ಲಿ ವಿಜಿಲೆನ್ಸ್ ತಂಡ ಇತ್ತೀಚೆಗೆ ದಾಳಿ ನಡೆಸಿ ಅಲ್ಲಿ ಸರಿಯಾದ ದಾಖಲೆ ಪತ್ರಗಳಿಲ್ಲದೆ ಬಚ್ಚಿಡಲಾಗಿದ್ದ 1,82,500 ರೂ. ನಗದು ವಶಪಡಿಸಿಕೊಂಡ ಪ್ರಕರಣದ ಐವರು ಆರೋಪಿಗಳ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ವಿಜಿಲೆನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಎ.ಕೆ. ರಾಜೀವನ್, ಅಬ್ದುಲ್ ಮಜೀದ್, ಸಿ.ಸಿ. ಕುಟ್ಟಪ್ಪನ್, ಕೆ.ಎಸ್. ಶ್ಯಾಮ್ ಮತ್ತು  ಸಿಜೆ ಜೈಸನ್ ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ತಲಶ್ಶೇರಿ ಎನ್‌ಕ್ವಯರಿ ಕಮಿಷನರ್ ಆಂಡ್ ಸ್ಪೆಷಲ್ ಜಡ್ಜ್ ಮಧು ಸೂಧನ್ ಆರೋಪಿಗಳನ್ನು ಖುಲಾ ಸೆಗೊಳಿಸಿ ತೀರ್ಪು ನೀಡಿದ್ದಾರೆ. ಖುಲಾಸೆಗೊಳಿಸ ಲ್ಪಟ್ಟವರ ಪೈಕಿ ಜೈಸನ್‌ರ ಹೊರತಾಗಿ ಇತರ ನಾಲ್ಕು ಮಂದಿ ಆರ್‌ಟಿಒ ಕಚೇರಿಯ ಸಿಬ್ಬಂದಿಗಳಾಗಿದ್ದಾರೆ.

RELATED NEWS

You cannot copy contents of this page