ತಳಂಗರೆ ಸರಕಾರಿ ಮುಸ್ಲಿಂ ವೊಕೇಶನಲ್ ಹೈಯರ್ ಸೆಕೆಂಡರಿಯಲ್ಲಿ ಉಪಜಿಲ್ಲಾ ವಿಜ್ಞಾನೋತ್ಸವ ಆರಂಭ
ಕಾಸರಗೋಡು: ಕಾಸರಗೋಡು ಉಪಜಿಲ್ಲಾ ವಿಜ್ಞಾನೋತ್ಸವ ತಳಂಗರೆ ಸರಕಾರಿ ಮುಸ್ಲಿಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ಗಣಿತ, ವೃತ್ತಿಪರಿಚಯ, ಐಟಿ ವಿಭಾಗಗಳಲ್ಲಾಗಿ 135 ಶಾಲೆಗಳಿಂದ 3000ದಷ್ಟು ಸ್ಪರ್ಧಿಗಳು ಪ್ರಥಮ ದಿನದಲ್ಲಿ ಭಾಗವಹಿಸಿದರು. ತಳಂಗರೆ ಸರಕಾರಿ ಮುಸ್ಲಿಂ ಶಾಲೆ, ದಖೀರತ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಸ್ಪರ್ಧೆಗಳು ಜರಗುತ್ತಿವೆ. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಪ್ರೊ. ರಾಜೇಂದ್ರ ಪಿಲಾಂಕಟ್ಟೆ ಮುಖ್ಯ ಅತಿಥಿಯಾಗಿದ್ದರು. ಪಿಟಿಎ ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದರು. ನಗರಸಭಾ ಕೌನ್ಸಿಲರ್ ಸಹೀರ್ ಆಸಿಫ್, ಉಪಜಿಲ್ಲಾ ಶಿಕ್ಷಣ ಅಧಿಕಾರಿ ಅಗಸ್ಟಿನ್ ಬರ್ನಾಂಡ್ ಮೊಂತೇರೊ, ಕೆ.ಎಸ್. ಅಹಮ್ಮದ್ ಬದ್ರುದ್ದೀನ್, ಪ್ರಾಂಶುಪಾಲೆ ಟಿ.ಎ. ಸಾಜಿತ, ಅಬ್ದುಲ್ ಲತೀಫ್, ಖಮರುನ್ನೀಸ, ಆರ್.ವಿ. ಪ್ರೇಮಾನಂದನ್ ಸಹಿತ ಹಲವರು ಉಪಸ್ಥಿತರಿದ್ದರು. ವಿ. ನಾರಾಯಣನ್ ಕುಟ್ಟಿ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಪಿ.ಡಿ. ಬಿಂದ ವಂದಿಸಿದರು.