ತೋಡಿನಲ್ಲಿ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಗಾಗಿ ಶೋಧ ತೀವ್ರ
ಬದಿಯಡ್ಕ: ತೋಡಿನಲ್ಲಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದ ಬಾಂಜತ್ತಡ್ಕ ನಿವಾಸಿ ಸೀತಾರಾಮ (52) ಎಂಬವರಿಗಾಗಿ ಶೋಧ ತೀವ್ರಗೊಳಿಸಲಾಗಿದೆ. ನಿನ್ನೆ ಸಂಜೆ ಅಗ್ನಿಶಾಮಕದಳ ಹಾಗೂ ಬದಿಯಡ್ಕ ಪೊಲೀಸರು ಚಾಳಿತ್ತಡ್ಕ ಹೊಳೆಯಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲಾ ಗಲಿಲ್ಲ. ಮೊನ್ನೆ ಸಂಜೆ ಹುಲ್ಲು ಹೆರೆಯಲೆಂದು ಹೋದ ಸೀತಾರಾಮ ಬಳಿಕ ಮನೆಗೆ ಮರಳಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ ತೋಡಿನ ಬಳಿ ಕತ್ತಿ, ರೈನ್ಕೋಟ್ ಮೊದಲಾ ದವು ಪತ್ತೆಯಾಗಿವೆ. ಇದರಿಂದ ಸೀತಾ ರಾಮ ತೋಡಿನಲ್ಲಿ ಪ್ರವಾಹಕ್ಕೆ ಸಿಲು ಕಿರುವುದಾಗಿ ಸಂಶಯಿಸಲಾಗಿದೆ.