ದುರ್ಗಾಶಕ್ತಿ ಕುಣಿತ ಭಜನಾ ತಂಡದಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಉಪ್ಪಳ: ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ೮೦ ಶೇ.ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಭೆ ಜರಗಿತು. ಪೈವಳಿಕೆ ಪಂಚಾಯತ್ ಸದಸ್ಯ  ರಾಜೀವಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.  ರಮ್ಯ ಬಿ ಸೀತಾಂಗೋಳಿ ಉದ್ಘಾಟಿಸಿ ಮಾತನಾಡಿದರು.  ಗೀತಾ ಸಾಹಿತ್ಯ ಸಂಭ್ರಮದ ರೂವಾರಿ ವಿಠಲ ನಾಯಕ್ ಕಲ್ಲಡ್ಕ ಮಾತನಾಡಿ ಮಕ್ಕಳಿಗೆ ಸಂಸ್ಕಾರದ ಜೀವನವನ್ನು ತಿಳಿಸುವುದರ ಮುಖಾಂತರ ಬದಲಾವಣೆ ಸಾಧ್ಯವೆಂದು ನುಡಿದರು. ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ. ಆಶಾಲತಾ ಚೇವಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರಸಾದ್ ರೈ ಕಯ್ಯಾರು, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಯಾದವ್ ಕೀರ್ತೇಶ್ವರ ಶುಭಾಶಂಸನೆಗೈದರು. ಮಕ್ಕಳಿಂದ ಕುಣಿತ ಭಜನೆ ಜರಗಿತು. ಭಜನಾ ತಂಡದ ಸಂಚಾಲಕ ಸತೀಶ್ ಕುಮಾರ್ ಪ್ರಸ್ತಾಪಿಸಿ, ವಿದ್ಯಾರ್ಥಿ ದೀಪ್ತಿ ಬಿ.ಕೆ. ವಂದಿಸಿದರು.

RELATED NEWS

You cannot copy contents of this page