ನವದಂಪತಿಗೆ ಹಲ್ಲೆ: ಮಹಿಳೆ, ಆಟೋ ಚಾಲಕನ ವಿರುದ್ಧ ಕೇಸು

ಮಂಜೇಶ್ವರ: ಕಾರು ತಡೆದು ನಿಲ್ಲಿಸಿ ನವದಂಪತಿಗೆ ಹಾಗೂ  ತಡೆಯಲೆತ್ನಿಸಿದ ಸಹೋದರನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಾಸರಗೋಡಿನ ನಸ್ರಿಯ ಹಾಗೂ ಆಟೋ ಚಾಲಕ ಮುಸ್ತಫ ಎಂಬಿವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೊನ್ನೆ ಸಂಜೆ  ಕುಂಬಳೆ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಸಮೀಪದ ಅಬ್ದುಲ್ ಲತೀಫ್, ಸಹೋದರ ಮುಹಮ್ಮದ್ ಅಲ್ತಾಫ್ (೨೨), ಪತ್ನಿ ಡಿ.ಎಂ. ಶಮ್ನ (೨೦) ಎಂಬಿವರ ಮೇಲೆ ಹಲ್ಲೆಗೈಯ್ಯಲಾಗಿತ್ತು. ಶಮ್ನ ಹಾಗೂ ಮುಹಮ್ಮದ್ ಅಲ್ತಾಫ್‌ರ ಮದುವೆ ಮೂರು ತಿಂಗಳ ಹಿಂದೆ ನಡೆದಿತ್ತು. ಕಾಸರಗೋಡಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಊರಿಗೆ ಮರಳುತ್ತಿದ್ದಾಗ ಮೊಗ್ರಾಲ್‌ನಲ್ಲಿ ಮೊದಲು ಕಾರು ತಡೆದು ನಿಲ್ಲಿಸಿರುವುದಾಗಿ ಹೇಳಲಾಗುತ್ತಿದೆ. ಅಲ್ಲಿಂದ ಪಾರಾಗಿ ಉಪ್ಪಳದ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ತಲುಪಿ ಉಪ್ಪಳ ಬಳಿ ಹಲ್ಲೆಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಬ್ದುಲ್ ಲತೀಫ್ ಸಹೋದರ ಹಾಗೂ ಅವರ ಪತ್ನಿಗೆ ಸಹಾಯಕ್ಕಾಗಿ ತಲುಪಿದ್ದರು.

RELATED NEWS

You cannot copy contents of this page