ನಿಂತಿದ್ದ ಬಸ್‌ಗೆ ಲಾರಿ ಢಿಕ್ಕಿ: 4 ಮಂದಿಗೆ ಗಾಯ

ಕಾಸರಗೋಡು: ಬೇರೊಂದು ವಾಹನವನ್ನು ಹಿಂದಿಕ್ಕಿ ಬಂದ ಲಾರಿ ನಿಂತಿದ್ದ ಬಸ್‌ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಪ್ರಯಾಣಿಕರ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ.  ಇಂದು ಬೆಳಿಗ್ಗೆ  ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ತಲಪ್ಪಾಡಿಯಿಂದ ಕಾಸರಗೋಡಿಗೆ ತೆರಳುತ್ತಿದ್ದ ಖಾಸಗಿ ಬಸ್  ಉಪ್ಪಳ ಗೇಟ್‌ಗೆ ತಲುಪಿದಾಗ ಪ್ರಯಾಣಿಕ ರನ್ನು ಇಳಿಸಲು ನಿಲ್ಲಿಸಲಾಗಿತ್ತು. ಈ ವೇಳೆ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಬೇರೊಂದು ವಾಹನವನ್ನು ಹಿಂದಿಕ್ಕುವ ವೇಳೆ ನಿಲ್ಲಿಸಿದ್ದ ಬಸ್‌ನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಡಚಣೆ ಉಂಟಾಯಿತು. ಬಸ್‌ನೊಳಗೆ  ಸಿಲುಕಿದ ಚಾಲಕ ಅಶ್ರಫ್‌ರನ್ನು ನಾಗರಿಕರು ರಕ್ಷಿಸಿದರು. ಬಸ್ ಪ್ರಯಾಣಿಕರಾದ ಇಬ್ಬರು ಹಾಗೂ ಲಾರಿ ಚಾಲಕ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕದಳ ತಲುಪಿ  ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮಗೊಳಿಸಲಾಯಿತು

RELATED NEWS

You cannot copy contents of this page