ನಿವೃತ್ತ ಉಪತಹಶೀಲ್ದಾರ್ ನಿಧನ

ಮಾನ್ಯ: ಕೊಲ್ಲಂಗಾನ ಶ್ರೀನಿಲಯ ನಿವಾಸಿ ನಿವೃತ್ತ ಉಪತಹಶೀಲ್ದಾರ್, ಕಲಾವಿದ ಉದಯ ಶಂಕರ್ ಎನ್.ಎ ನಿಧನಹೊಂದಿದರು. ತುಳು, ಕನ್ನಡ, ಮಲಯಾಳ ರಂಗಭೂಮಿಯಲ್ಲಿ  ಗುರುತಿಸಿಕೊಂಡಿದ್ದ ಇವರು ನಾಟಕರಚನೆ, ನಿರ್ದೇಶನ, ಪ್ರಸಾದನ ರಂಗದಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡು ಜಿಲ್ಲಾ ತುಳುಕೂಟದ ಕಾರ್ಯದರ್ಶಿ, ನವರಂಗ ಆರ್ಟ್ಸ್‌ನ ಸ್ಥಾಪಕ ಅಧ್ಯಕ್ಷ, ಕೊಲ್ಲಂಗಾನ ಶ್ರೀ ಶಾರದಾ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೇರಳ ರಾಜ್ಯೋದಯ ಪ್ರಶಸ್ತಿ, ಧರ್ಮಸ್ಥಳ ದಿ|  ರತ್ನವರ್ಮ ಹೆಗ್ಡೆ ಸ್ಮಾರಕ ನಾಟಕ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಮೃತರು ಪತ್ನಿ ಶಶಿಪ್ರಭಾ, ಮಕ್ಕಳಾದ ಶ್ರೀರಕ್ಷಾ, ಶ್ರೀದೀಕ್ಷಾ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page