ನೂರು ಕಂದಮ್ಮಗಳನ್ನು ದತ್ತು ನೀಡಿದ ಶಿಶು ಸಂರಕ್ಷಣಾ ಸಮಿತಿ

ಕಾಸರಗೋಡು: ರಾಜ್ಯ ಶಿಶು ಕಲ್ಯಾಣ ಸಮಿತಿಯ ದತ್ತು ಸ್ವೀಕಾರ  ಕೇಂದ್ರದಲ್ಲಿ  ಪೋಷಿಸಲಾಗುತ್ತಿರುವ ಅನಾಥ ಕಂದಮ್ಮಗಳ ಪೈಕಿ ನೂರು ಶಿಶುಗಳನ್ನು  ಸಮಿತಿ ದತ್ತು ನೀಡಿದೆ. ರಾಜ್ಯ ಶಿಶು ಕಲ್ಯಾಣ ಸಮಿತಿ ಯನ್ನು  2023  ಫೆಬ್ರವರಿ ತಿಂಗಳಿಂದ ಈತನಕವಾಗಿ  ಇಷ್ಟೊಂದು ಶಿಶುಗಳ ನ್ನು ಸಮಿತಿ ದತ್ತು ರೂಪದಲ್ಲಿ  ನೀಡಿದ್ದು  ಇತಿಹಾಸದಲ್ಲೇ ಇದು ಪ್ರಥಮವಾಗಿದೆ. ರಾಜ್ಯ ಶಿಶು ಕಲ್ಯಾಣ ಸಮಿತಿಯ ಕೇಂದ್ರ ತಿರುವನಂತಪು ರದಲ್ಲಿ ಕಾರ್ಯವೆಸಗುತ್ತಿದೆ. ಕಳೆದ ಶುಕ್ರವಾರದಂದು ಮಾತ್ರವಾಗಿ ಈ ಕೇಂದ್ರದಿಂದ ಏಳು ಶಿಶುಗಳನ್ನು ದತ್ತು ರೂಪದಲ್ಲಿ ನೀಡಲಾಗಿದೆ.

 ಹೀಗೆ ಈ ಕೇಂದ್ರದಿಂದ ಮಕ್ಕಳ ನ್ನು ದತ್ತು ಪಡೆದವರಲ್ಲಿ ವಿದೇಶೀ ಯರೂ ಒಳಗೊಂಡಿದ್ದಾರೆ.  17 ಮಕ್ಕಳನ್ನು ವಿದೇಶಿ ಯರು ದತ್ತು ರೂಪದಲ್ಲಿ ಪಡೆದುಕೊಂಡಿ ದ್ದಾರೆ. ಕೇರಳದ  49 ದಂಪತಿಗಳು ಇಲ್ಲಿಂದ ಶಿಶುಗಳನ್ನು ದತ್ತು ರೂಪದಲ್ಲಿ  ಸ್ವೀಕರಿಸಿ ದ್ದು,  ಸಂತಾನ ಭಾಗ್ಯ ಹೊಂದದ ಹೊರ ರಾಜ್ಯಗಳ ೩೪ ದಂಪತಿಗಳು ಇಲ್ಲಿಂದ ಶಿಶುಗಳನ್ನು ದತ್ತು ರೂಪದಲ್ಲಿ ಪಡೆದು ಕೊಂಡಿದ್ದಾರೆ. ಅಮ್ಮ ತೊಟ್ಟಿಲುಗಳು ರಸ್ತೆ ಬದಿ ಮತ್ತಿತರೆಡೆಗ ಳಲ್ಲಿ ಉಪೇಕ್ಷಿಸಲಾ ಗುತ್ತಿರುವ ಶಿಶುಗಳ ನ್ನು ಶಿಶು ಕಲ್ಯಾಣ ಸಮಿತಿ  ಪಡೆದು ಕೊಂಡು ಅವುಗಳನ್ನು ಸಂರಕ್ಷಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page