ಪಣಂಬೂರು ಸಮುದ್ರದಲ್ಲಿ 3 ಮಂದಿ ನೀರುಪಾಲು
ಮಂಗಳೂರು: ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಘಟನೆ ನಿನ್ನೆ ಸಂಜೆ ಪಣಂಬೂರು ಬೀಚ್‌ನಲ್ಲಿ ನಡೆದಿದೆ. ಕೈಕಂಬ ರೋಸಾ ಮಿಸ್ತೀಕ ಕಾಲೇಜಿನ ಪ್ರಥಮ ವರ್ಷ ಪಿಯುಸಿ ವಿದ್ಯಾರ್ಥಿ ಲಿಖಿತ್ (೧೮) ಬೈಕಂಪಾಡಿ ಎಂಎಂಆರ್ ಕಂಪೆನಿಯ ಮೇಲ್ವಿಚಾರಕ ನಾಗರಾಜ್ (೨೪), ಇನ್ನೊಂದು ಕಂಪೆನಿಯ ಡೆಲಿವರಿ ಬಾಯ್ ಮಿಲನ್ (೨೦) ನಾಪತ್ತೆಯಾದವರೆಂದು ತಿಳಿದು ಬಂದಿದೆ. ನಿನ್ನೆ ಸಂಜೆ ೬ ಗಂಟೆ ವೇಳೆಗೆ ಪಣಂಬೂರು ಸಮುದ್ರ ಕಿನಾರೆಯಲ್ಲಿ ಸಮುದ್ರದ ಅಲೆಗಳ ಜೊತೆ ಆಟವಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲೆಯ ರಭಸಕ್ಕೆ ನೀರುಪಾಲಾಗಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ತಲುಪಿದ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.