ಬದಿಯಡ್ಕ ಕೃಷ್ಣ ಪೈ ಸ್ಮರಣಾಂಜಲಿ 9ರಂದು
ಬದಿಯಡ್ಕ: ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೇತೃತ್ವದಲ್ಲಿ ದಿ| ಬದಿಯಡ್ಕ ಕೃಷ್ಣ ಪೈ ಅವರ ಸ್ಮರಣಾಂಜಲಿ ಕಾರ್ಯಕ್ರಮ ಈ ತಿಂಗಳ 9ರಂದು ಅಪರಾಹ್ನ ೨.೩೦ರಿಂದ ಬದಿಯಡ್ಕ ಗಣೇಶ್ ಪೈ ನಿವಾಸದಲ್ಲಿ ನಡೆಯಲಿದೆ. ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ. ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಶಿಧರ ಶೆಟ್ಟಿ, ಡಾ| ಶ್ರೀನಿಧಿ ಸರಳಾಯ ಭಾಗವಹಿಸುವರು. ವಾಮನ್‌ರಾವ್ ಬೇಕಲ್, ಪ್ರೊ. ಎ. ಶ್ರೀನಾಥ್, ಉನ್ನತಿ ಪೈ, ಗಣೇಶ್ ಪೈ, ವಸಂತ ಕೆರೆಮನೆ ಉಪಸ್ಥಿತರಿರುವರು. ಬಳಿಕ ವಿರಾಜ್ ಅಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಲಕ್ಷ್ಮಿ ಜಿ. ಪೈ ಮತ್ತು ತೇಜಸ್ ಪೈ ಬಳಗದವರಿಂದ ಗೀತಗಾಯನ ನಡೆಯಲಿದೆ.