ಬರ್ತ್‌ಡೇ ಪಾರ್ಟಿಗೆ ಹೋದಾತ ಸ್ನೇಹಿತನ ಚಿನ್ನದ ಸರ ಎಗರಿಸಿ ಪರಾರಿ

ಮಂಜೇಶ್ವರ: ಸ್ನೇಹಿತನ ಹುಟ್ಟು ಹಬ್ಬ ಆಚರಣೆಗೆ ತೆರಳಿದಾತ   ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ಮಾಯಿಪ್ಪಾಡಿ ನಿವಾಸಿ ಯಾದ ಯುವಕನ ಹುಟ್ಟು ಹಬ್ಬ ಆಚರಣೆ ನಿನ್ನೆ ಮಂಜೇಶ್ವರದ ರೆಸಾರ್ಟ್‌ವೊಂದರಲ್ಲಿ ನಡೆದಿತ್ತು. ಅದಕ್ಕೆ ಇದೇ ಯುವಕನ ಸ್ನೇಹಿತನಾದ ಕಾಸರಗೋಡು ಬಟ್ಟಂಪಾರೆ ನಿವಾಸಿಯಾದ ಮಹೇಶ್ ಎಂಬಾತನೂ ತೆರಳಿದ್ದನು. ಕಾರ್ಯಕ್ರಮದಲ್ಲಿ ಸ್ನೇಹಿತನಿಂದ ಮಹೇಶ್ ಹಣ ಕೇಳಿದ್ದಾನೆನ್ನಲಾಗಿದೆ. ಹಣ ಸಿಗದಿದ್ದಾಗ ಅವರೊಳಗೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಸ್ನೇಹಿತನ ಕುತ್ತಿಗೆಯಲ್ಲಿದ್ದ ಆರು ಪವನ್‌ನ ಸರವನ್ನು ಎಗರಿಸಿ ಮಹೇಶ್ ಪರಾರಿಯಾಗಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ಮಂಜೇಶ್ವರ ಪೊಲೀಸರು   ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಕಾಸರಗೋಡು ಪೊಲೀಸರು ಮಹೇಶ್‌ನನ್ನು ಕಸ್ಟಡಿಗೆ ತೆಗೆದು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

RELATED NEWS

You cannot copy contents of this page