ಬಿಜೆಪಿ ಮಂಡಲ ಸಮಿತಿ ಸದಸ್ಯನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಎಡನೀರು: ಚೆಂಗಳ ಪಂ.ನ ೨ನೇ ವಾರ್ಡ್ ಅದ್ರುಗುಳಿಯ ನಿವಾಸಿ ಚಂದ್ರಶೇಖರ್ ನಾಯ್ಕ್ ಕೆಲಸದ ವೇಳೆ ಬಿದ್ದು ಗಾಯಗೊಂಡಿದ್ದು, ಶಯ್ಯಾ ವಲಂಬಿಯಾಗಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಲ್ಲಿ ಬಾವಿ ಕೆಲಸ ನಡೆಸುತ್ತಿದ್ದಾಗ ಮಣ್ಣು ಜರಿದು ಬಿದ್ದು ಗಂಭೀರ ಗಾಯಗೊಂಡಿದ್ದು, ಈಗ ಹಾಸಿಗೆ ಹಿಡಿದಿದ್ದಾರೆ. ಇವರ ಮಕ್ಕಳಾದ ಪ್ಲಸ್‌ಟು ವಿದ್ಯಾರ್ಥಿನಿ ಅನೀಷ, 10ನೇ ತರಗತಿ ವಿದ್ಯಾರ್ಥಿನಿ ಅಹಿದಳ ಕಲಿಕೆಗಾಗಿ ಅಗತ್ಯ ಪುಸ್ತಕಗಳನ್ನು ಬಿಜೆಪಿ ಮಂಡಲ ಸಮಿತಿ ಸದಸ್ಯ ಎ.ಕೆ. ಪ್ರಭಾಕರನ್ ಕೊಡುಗೆಯಾಗಿ ನೀಡಿದ್ದಾರೆ. ಪುಸ್ತಕಗಳನ್ನು ಮನೆಯಲ್ಲಿ ಇತ್ತೀಚೆಗೆ ಹಸ್ತಾಂತರಿಸಿದರು.

RELATED NEWS

You cannot copy contents of this page