ಭಾರೀ ಪ್ರಮಾಣದ ಕರ್ನಾಟಕ, ಗೋವಾ ನಿರ್ಮಿತ ಮದ್ಯ ವಶ ಓರ್ವ ಸೆರೆ

ಕುಂಬಳೆ: ಕೊಪಾಡಿ ಗ್ರಾಮದ ಕಳ ತ್ತೂರು ತಪಾಸಣಾ ಕೇಂದ್ರದ ಬಳಿಯ ಮನೆಯೊಂದರಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 66.06 ಲೀಟರ್ ಕರ್ನಾಟಕ ಮದ್ಯ ಮತ್ತು ೮.೨೫ ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆ ಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಆ ಮನೆ ನಿವಾಸಿ ಸುರೇಶ್ ಪಿ. (60) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ.ಯವರ ನೇತೃತ್ವದಲ್ಲಿ ಈ ಅಬಕಾರಿ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ. ಕೆ.ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಶಾಂತ್ ಕುಮಾರ್, ಸಿಇಒಗಳಾದ ಸತೀಶನ್, ಧನ್ಯಾ ಮತ್ತು ಐ.ಬಿ.  ಪ್ರಿವೆಂಟಿವ್ ಆಫೀಸರ್ ಬಿಜೋಯ್ ಎಂಬಿವರು ಒಳಗೊಂಡಿದ್ದಾರೆ.

RELATED NEWS

You cannot copy contents of this page