ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ, ಡಿವಿಡೆಂಟ್ ಘೋಷಣೆ
ಮಂಗಲ್ಪಾಡಿ : ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷ ಪ್ರೇಮ್ ಕುಮಾರ್ ಐಲರ ಅಧ್ಯಕ್ಷತೆಯಲ್ಲಿ ಜರಗಿತು .ಬ್ಯಾಂಕ್ 2023-24ನೇ ವರ್ಷದಲ್ಲಿ 297 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದು ಲೆಕ್ಕಪರಿಶೋಧನೆ ವರ್ಗೀಕರಣದಲ್ಲಿ ಎ ತರಗತಿಯಾಗಿದ್ದು ಹಲವು ವರ್ಷಗಳಿಂದ ಲಾಭಗಳಿಸಿ ಸದಸ್ಯರಿಗೆ ಡಿವಿಡೆಂಟ್ ನೀಡುತ್ತಿದೆ. ಈ ವರ್ಷ ಸದಸ್ಯರಿಗೆ 4% ಡಿವಿಡೆಂಟು ಘೋಷಿಸಲಾಯಿತು ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಆಡಳಿತ ಮಂಡಳಿ ಸದಸ್ಯರನ್ನು, ದೇಶ ಕಾಯುವ ವೀರಯೋಧ ಪ್ರವೀಣ್ ಕೆ ಮತ್ತು ಕಂಬಳ ಓಟಗಾರ ರಕ್ಷಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಪದ್ಮನಾಭರ ಆಶ್ರಿತರಿಗೆ 2 ಲಕ್ಷ ರೂಪಾಯಿ ಅಪಘಾತ ವಿಮೆ ವಿತರಿಸಲಾಯಿತು. ಕಾರ್ಯದರ್ಶಿ ಬಾಲಸುಬ್ರಮಣ್ಯ ವಾರ್ಷಿಕ ವರದಿ ಮಂಡಿಸಿದರು. ಆಡಳಿತ ಮಂಡಳಿ ಸದಸ್ಯ ರಘು ಸಿ ಚೆರುಗೋಳಿ ಸ್ವಾಗತಿಸಿ ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧಕ ರಾಜೇಶ್ ವಂದಿಸಿದರು. ಶಾಖಾ ಪ್ರಭಾರಿ ಸಚ್ಚಿದಾನಂದ ಶೆಟ್ಟಿ ಮತ್ತು ದಿನೇಶ್ ಮುಳಿಂಜ ಸನ್ಮಾನಿತರನ್ನು ಪರಿಚಯಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಭರತ್ ರೈ ಕೋಡಿಬೈಲು, ಆಡಳಿತ ಮಂಡಳಿ ಸದಸ್ಯ ರವೀಶ ಕೊಡಂಗೆ, ಜಯಂತ ಬಂದ್ಯೋಡು,ಸAಜೀವ ಐತ, ಹರಿನಾಥ್ ಭಂಡಾರಿ ಮುಳಿಂಜ, ಅಮಿತ್ ಇ.ಎಸ್, ಮತ್ತು ಸದಸ್ಯೆಯರಾದ ಹೇಮಾವತಿ, ರಜನಿ, ಅಮಿತ ಉಪಸ್ಥಿತರಿದ್ದರು.