ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಂಗಮ

ಪೈವಳಿಕೆ: ಮಂಜೇಶ್ವರ ತಾಲೂಕು ಲೈಬ್ರೆರಿ ಕನ್ಸಿಲ್‌ನ ‘ತಾಲೂಕು ಲೈಬ್ರೆರಿ ಸಂಗಮ’ ಪೈವಳಿಕೆ ಪಂಚಾಯತ್ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಉದ್ಘಾಟಿಸಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕೆ. ಅಧ್ಯಕ್ಷತೆ ವಹಿಸಿದರು, ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಪಿ.ಕೆ.  ಮಾತನಾಡಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ವಾರ್ಷಿಕ ವರದಿಯನ್ನು ಮಂಡಿಸಿದರು. ಕಿಶೋರ್ ಕುಮಾರ್ ಪಿ. ವಾರ್ಷಿಕ ಆದಾಯ ಮತ್ತು ವೆಚ್ಚದ ವರದಿ, ದಾಸಪ್ಪ ಶೆಟ್ಟಿ ಕೆ. ವಾರ್ಷಿಕ ಬಜೆಟ್ ಮಂಡಿಸಿದರು. ತಾಲೂಕಿನಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿವಿಧ ಗ್ರಂಥಾಲಯಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದರು.

ತಾಲೂಕು ಲೈಬ್ರೆರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಕೆ. ಸ್ವಾಗತಿಸಿದರು. ವಿವಿಧ ಕಾರ್ಯಸೂಚಿಗಳ ಅನುಮೋದನೆಯೊಂದಿಗೆ ಸಂಗಮ ಮುಕ್ತಾಯಗೊಂಡಿತು

RELATED NEWS

You cannot copy contents of this page